Advertisement

ಮನ್‌ ಕಿ ಬಾತ್‌ ಚಾಯ್‌ ಕೆ ಸಾಥ್‌

06:10 AM Nov 27, 2017 | Team Udayavani |

ಅಹಮದಾಬಾದ್‌: ಕಳೆದ ಲೋಕಸಭೆ ಚುನಾವಣೆ ವೇಳೆ “ಚಾಯ್‌ ಪೇ ಚರ್ಚಾ’ ನಡೆಸಿ ಮತದಾರರ ಮನ ಗೆದ್ದಿದ್ದ ಬಿಜೆಪಿ, ಈ ಬಾರಿ ಗುಜರಾತ್‌ ವಿಧಾನಸಭಾ ಚುನಾವಣೆಗೂ ಇದೇ ತಂತ್ರವನ್ನು ಅನುಸರಿಸಿದೆ. ಪ್ರಧಾನಿ ಮೋದಿ ಅವರನ್ನು “ಚಾಯ್‌ವಾಲಾ’ ಎಂದು ವ್ಯಂಗ್ಯ ವಾಡಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡುವ ಸಲುವಾಗಿಯೇ 
ಭಾನುವಾರ ಗುಜರಾತ್‌ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ “ಮನ್‌ ಕಿ ಬಾಕ್‌- ಚಾಯ್‌ ಕೇ ಸಾಥ್‌’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೇಡಿಯೋದಲ್ಲಿ ಪ್ರಧಾನಿ ಮೋದಿ ಅವರ ಮನದ ಮಾತು ಕೇಳುತ್ತಾ, ಚಹಾ ಸೇವಿಸುವ ಕಾರ್ಯಕ್ರಮ ಇದಾಗಿತ್ತು.

Advertisement

ಇತ್ತೀಚೆಗಷ್ಟೇ ಕಾಂಗ್ರೆಸ್‌ ಯುವ ಘಟಕವು ಮೋದಿ ಅವರನ್ನು ಚಾಯ್‌ವಾಲಾ ಎಂದು ಟೀಕಿಸಿದ್ದ ಚಿತ್ರವೊಂದು ವೈರಲ್‌ ಆಗಿದ್ದ ಹಿನ್ನೆಲೆಯಲ್ಲಿ, ಗುಜರಾತ್‌ನಾದ್ಯಂತ ಇಂಥ ಕಾರ್ಯಕ್ರಮ ಏರ್ಪಡಿಸಿ ಕಾಂಗ್ರೆಸ್‌ಗೆ ಟಾಂಗ್‌ ನೀಡಲಾಯಿತು. 50 ಸಾವಿರ ಮತಗಟ್ಟೆಗಳಲ್ಲಿ ಕಾರ್ಯಕ್ರಮ ನಡೆದಿದ್ದು, ಕೇಂದ್ರ ಸಚಿವರಾದ ಅರುಣ್‌ ಜೇಟಿÉ, ಸ್ಮತಿ ಇರಾನಿ, ಪಿಯೂಷ್‌ ಗೋಯಲ್‌ ಮತ್ತಿತರ ನಾಯಕರು ಬೇರೆ ಬೇರೆ ಪ್ರದೇಶಗಳಲ್ಲಿ ಇದರ ನೇತೃತ್ವ ವಹಿಸಿದ್ದರು. ಇದೇ ವೇಳೆ, ಮಾತನಾಡಿದ ಕೇಂದ್ರ ಸಚಿವ ವಿಜಯ್‌ ಗೋಯಲ್‌, “ಯುವ ಘಟಕವು ಮೋದಿ ಅವರನ್ನು ಅವಮಾನಿಸಿ ಹಾಕಿದ್ದ ಮೀಮ್‌ಗೆ ಕಾಂಗ್ರೆಸ್‌ ಕನಿಷ್ಠಪಕ್ಷ ಖಂಡನೆಯನ್ನಾದರೂ ವ್ಯಕ್ತಪಡಿಸಬೇಕಿತ್ತು’ ಎಂದಿದ್ದಾರೆ.

ಏತನ್ಮಧ್ಯೆ, “ರಾಷ್ಟ್ರೀಯವಾದಿ ಶಕ್ತಿಗಳಿಂದ ದೇಶವನ್ನು ಉಳಿಸಿ’ ಎಂದು ಕ್ರಿಶ್ಚಿಯನ್‌ ಸಮುದಾಯದವರಿಗೆ ಕರೆ ನೀಡಿದ ಗಾಂಧಿನಗರದ ಆರ್ಚ್‌ಬಿಷಪ್‌ಗೆ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದೆ. 

ಮೇಕ್‌ ಇನ್‌ ಇಂಡಿಯಾ ಇನ್ನಿಲ್ಲ!: “ಪ್ರಧಾನಿ ಮೋದಿ ಅವರ “ಮೇಕ್‌ ಇನ್‌ ಇಂಡಿಯಾ’ ಯೋಜನೆ ಈಗಷ್ಟೇ ನಿಧನಹೊಂದಿತು. ಗುಜರಾತ್‌ ತೆರಿಗೆದಾರರ 33 ಸಾವಿರ ಕೋಟಿ ರೂ.ಗಳು ಭಸ್ಮವಾಗಿ ಹೋಯಿತು’. ಹೀಗೆಂದು ಮೋದಿ ವಿರುದ್ಧ ಕಿಡಿಕಾರಿದ್ದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ. ಗುಜರಾತ್‌ ಸ್ಥಾವರದಲ್ಲಿ ನ್ಯಾನೋ ಕಾರುಗಳ ತಯಾರಿಕೆ ಸ್ಥಗಿತಗೊಂಡಿದೆ ಎಂಬ ಮಾಧ್ಯಮ ವರದಿಯನ್ನು ಪ್ರಸ್ತಾಪಿಸಿದ ಅವರು, ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಜಾತಿವಾದಿಗಳ ಹೊರಗುತ್ತಿಗೆ: ರೂಪಾಣಿ 
ಪ್ರಧಾನಿ ಮೋದಿ ಅವರ ಜನಪ್ರಿಯತೆ ಕಾಂಗ್ರೆಸ್‌ಗೆ ಭೀತಿ ಮೂಡಿಸಿದೆ. ಹಾಗಾಗಿ ಆ ಪಕ್ಷವು ಗುಜರಾತ್‌ನಲ್ಲಿ ಜಾತಿವಾದದ ಆಶ್ರಯ ಪಡೆದಿದೆ. ಜಾತಿವಾದಿ ನಾಯಕರನ್ನು ಪ್ರಚಾರಕ್ಕಾಗಿ ಹೊರಗುತ್ತಿಗೆ ಪಡೆದಿದೆ ಎಂದು ಗುಜರಾತ್‌ ಸಿಎಂ ವಿಜಯ್‌ ರೂಪಾಣಿ ಅಭಿಪ್ರಾಯಪಟ್ಟಿ ದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಗುಜರಾತ್‌ ಅಭಿವೃದ್ಧಿಯ ಕುರಿತು ಸುಳ್ಳೇ ಸುಳ್ಳು ಮಾಹಿತಿ ನೀಡುತ್ತಿ ರುವ ರಾಹುಲ್‌ಗಾಂಧಿ ಒಬ್ಬ ಗಪ್ಪಿದಾಸ್‌(ಸುಳ್ಳುಗಾರ) ಎಂದೂ ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next