Advertisement

ಮನುಷ್ಯನಿಗೆ ಈಜುನಿಂದ ನಿರಾಳ ಭಾವ

09:34 PM Apr 24, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಮನುಷ್ಯನಿಗೆ ಯಾವ ಕ್ರೀಡೆಯಿಂದಲೂ ಸಿಗದಷ್ಟು ಮಾನಸಿಕ ನೆಮ್ಮದಿ, ನಿರಾಳತೆ ಈಜಿನಿಂದ ಮಾತ್ರ ಸಿಗುತ್ತದೆ. ಈಜು ಆತ್ಮರಕ್ಷಣೆ ಕಲೆಗಳಲ್ಲಿ ಒಂದಾಗಿದ್ದು, ಪ್ರತಿಯೊಬ್ಬರು ಈಜು ಕಲಿಯುವುದು ತೀರಾ ಅವಶ್ಯಕ ಎಂದು ಜಿಲ್ಲಾ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ತಿಳಿಸಿದರು.

Advertisement

ನಗರದ ಸರ್‌ ಎಂ.ವಿಶ್ವೇಶ್ವಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರದ ಭಾಗವಾಗಿ ಮೊದಲ ಹಂತದ ಈಜು ಕಲಿಕಾ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಈಜು ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಇಲಾಖೆ ವತಿಯಿಂದ ಪ್ರಶಸ್ತಿ ಹಾಗೂ ಮೆಡಲ್‌ ವಿತರಿಸಿ ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿಯೇ ಕಲಿಯಬೇಕು: ಬಹಳಷ್ಟು ಜನತೆ ಈಜು ಕಲಿಯದೇ ಕೆಲವು ಪ್ರಕೃತಿ ವಿಕೋಪ ಸೇರಿದಂತೆ ಜಲಪಾತಗಳಲ್ಲಿ ಬಿದ್ದು ಮೃತಪಡುತ್ತಾರೆ. ಆದರೆ ಈಜು ಕಲಿತವರು ಜಲಾಶಯಗಳಲ್ಲಿ ಬಿದ್ದ ತಕ್ಷಣ ದಡ ಮಟ್ಟುತ್ತಾರೆ. ಮತ್ತೂಬ್ಬರನ್ನು ರಕ್ಷಿಸಲು ಸಾಧ್ಯವಿದೆ ಎಂದರು. ಬೇರೆ ಕ್ರೀಡೆಗಳಲ್ಲಿ ತೊಡಗಿದರೆ ಮನುಷ್ಯನಿಗೆ ಆಯಾಸವಾಗುತ್ತೆ.

ಆದರೆ ಎಷ್ಟೇ ಬಾರಿ ಈಜು ಮಾಡಿದರೂ ಆಯಾಸ ಆಗುವುದಿಲ್ಲ. ಈಜು ಮಾನಸಿಕ ಹಾಗೂ ದೈಹಿಕವಾಗಿ ಮನುಷ್ಯನನ್ನು ಸದೃಢಗೊಳಿಸುತ್ತದೆ. ಪೋಷಕರು ಚಿಕ್ಕ ವಯಸ್ಸಿಗೆ ಮಕ್ಕಳಿಗೆ ಈಜು ಕಲಿಸುವ ತರಬೇತಿ ಕಳಿಸುವುದು ಬಹಳ ಮುಖ್ಯ. ದೊಡ್ಡವರಾದ ಮೇಲೆ ಈಜು ಕಲಿಕೆ ಮೇಲೆ ಆಸಕ್ತಿ ಬರುವುದಿಲ್ಲ ಎಂದರು.

ಜಿಲ್ಲೆಗೆ ಮಾದರಿ ಈಜುಕೊಳ: ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ರಾಜ್ಯಕ್ಕೆ ಮಾದರಿಯಾಗಿದೆ. ಬೆಂಗಳೂರು ಬಿಟ್ಟರೆ ಸುಸಜ್ಜಿತವಾದ ಈಜುಕೊಳ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಇದೆ. ಮೊದಲನೇ ಹಂತದ ತರಬೇತಿಗೆ ಮಕ್ಕಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಜಿಲ್ಲೆಯ ಜನತೆ ಹಾಗೂ ಪೋಷಕರು ಈಜುಕೊಳವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ರುದ್ರಪ್ಪ ಕೋರಿದರು.

Advertisement

1 ರಿಂದ 10ನೇ ತರಗತಿ ಮಕ್ಕಳು: 6 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಆಯೋಜಿಸಲಾಗಿದ್ದ ಈಜು ತರಬೇತಿ ಶಿಬಿರದಲ್ಲಿ 1 ರಿಂದ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಆಸಕ್ತಿಯಿಂದ ಈಜು ತರಬೇತಿಯಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಿಂದ ಆಗಮಿಸಿದ್ದ ಖ್ಯಾತ ಈಜು ತರಬೇತಿದಾರ ಪುಂಡಲೀಕಾ ರವರು ಮಕ್ಕಳಿಗೆ ಈಜು ತರಬೇತಿ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಇಲಾಖೆ ವತಿಯಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಈಜು ತರಬೇತಿಗೆ 84 ಮಂದಿ ಭಾಗಿ: ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಜಿಲ್ಲಾ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯ ಸುಮಾರು 84 ಮಂದಿ ಶಾಲಾ ಮಕ್ಕಳಿಗೆ ಮೊದಲ ಹಂತದಲ್ಲಿ 21 ದಿನಗಳ ಕಾಲ ಈಜು ಕಲಿಕಾ ತರಬೇತಿ ಆಯೋಜಿಸಲಾಗಿತ್ತು. ಕಡೆ ದಿನ ಮಕ್ಕಳಿಗೆ ವಿವಿಧ ಹಂತದಲ್ಲಿ ಈಜು ಸ್ಪರ್ಧೆಗಳನ್ನು ಆಯೋಜಿಸಿದ ಬಳಿಕ ವಿಜೇತರಾದ ವಿದ್ಯಾರ್ಥಿಗಳಿಗೆ ಕ್ರೀಡಾ ಇಲಾಖೆ ವತಿಯಿಂದ ಪ್ರಮಾಣ ಪತ್ರ ಹಾಗೂ ಮೆಡಲ್‌ಗ‌ಳನ್ನು ವಿತರಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next