Advertisement

ಶೀಲ ಶಂಕಿಸಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಪತಿ!

03:21 PM Jul 11, 2021 | Team Udayavani |

ಹುಬ್ಬಳ್ಳಿ: ಶೀಲ ಶಂಕಿಸಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತಿಯೇ ಕೊಲೆ ಮಾಡಿದ ಘಟನೆ ತಾಲೂಕಿನ ಕುಸುಗಲ್ಲ ಗ್ರಾಮದಲ್ಲಿ ನಡೆದಿದೆ.

Advertisement

ಮೂಲತಃ ಗದಗನವರಾದ ಕುಸುಗಲ್ಲ ಗ್ರಾಮದ ಮೈರುನ್ನೀಸಾ ಸೈಫ ಅಲಿ ಇಟಿ (31 ವ) ಕೊಲೆಯಾಗಿದ್ದಾರೆ.

ಇದನ್ನೂ ಓದಿ:ಆತ ನಮ್ಮನೆ ಹುಡುಗ, ತಪ್ಪು ಮಾಡಿದಾಗ ಹೊಡೆದೆ, ಅದು ನಮ್ಮ ಪ್ರೀತಿಯ ಸಂಬಂಧ: ಡಿ.ಕೆ.ಶಿವಕುಮಾರ್

ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಸೈಫ್ ಅಲಿ, ಪತ್ನಿಯ ಶೀಲದ ಬಗ್ಗೆ ಅನುಮಾನ ಪಡುತ್ತಿದ್ದ. ಶುಕ್ರವಾರ ರಾತ್ರಿ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ನಂತರ ಆಕೆಯ ತಲೆಯಮೇಲೆ ಕಲ್ಲು ಎತ್ತಿಹಾಕಿ ಹಾಕಿದಾಗ ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡಿದ್ದ ಮೈರುನ್ನೀಸಾ ಅವರನ್ನು ಕಿಮ್ಸ್ ಗೆ ದಾಖಲಿಸಲಾಗುತ್ತು. ಚಿಕಿತ್ಸೆ ಫಲಿಸದೆ ರವಿವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೈಫ ಅಲಿಯ ವಿಚಾರಣೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next