Advertisement

Dr BR Ambedkar ಜಯಂತಿ ಆಚರಿಸಿದ ದಲಿತ ಯುವಕನ ದಾರುಣ ಹತ್ಯೆ: ಏಳು ಮಂದಿ ಆರೋಪಿಗಳ ಬಂಧನ

12:46 PM Jun 04, 2023 | Team Udayavani |

ನಾಂದೇಡ್: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಯ ಕಾರಣಕ್ಕೆ ನಡೆದ 24ರ ಹರೆಯದ ದಲಿತ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಶನಿವಾರ ಏಳು ಮಂದಿಯನ್ನು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬೋಂಧರ್ ಹವೇಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Advertisement

ಮೃತರನ್ನು ಅಕ್ಷಯ್ ಭಲೇರಾವ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಗುರುವಾರ ಸಂಜೆ ಆರೋಪಿಗಳು ಮೇಲ್ಜಾತಿ ಸಮುದಾಯದ ವ್ಯಕ್ತಿಯೊಬ್ಬರ ವಿವಾಹವನ್ನು ಆಚರಿಸುತ್ತಿದ್ದಾಗ ಭಲೇರಾವ್ ಅವರು ಹಾದುಹೋಗುತ್ತಿದ್ದರು. ಅವರಲ್ಲಿ ಕೆಲವರು ಕತ್ತಿಗಳನ್ನು ಹಿಡಿದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:S1 EP 104 45ಕ್ಕೊ ಹೆಚ್ಚು ಸ್ಥಳೀಯ ಬತ್ತದ ತಳಿಗಳನ್ನ ಉಳಿಸಿ ಬೆಳೆಸುತ್ತಿರುವ ರೈತ ನೆಲ್ಲಚ್ಚನ್ ರಾಮನ್

ಭಲೇರಾವ್ ಮತ್ತು ಅವರ ಸಹೋದರ ಆಕಾಶ್ ಅವರನ್ನು ನೋಡಿದ ನಂತರ, ಆರೋಪಿಗಳಲ್ಲಿ ಒಬ್ಬರು “ಗ್ರಾಮದಲ್ಲಿ ಭೀಮ ಜಯಂತಿ (ಏಪ್ರಿಲ್ 14 ರಂದು ಅಂಬೇಡ್ಕರ್ ಅವರ ಜನ್ಮದಿನ) ಆಚರಿಸಿದ್ದಕ್ಕಾಗಿ ಈ ಜನರನ್ನು ಕೊಲ್ಲಬೇಕು” ಎಂದಿದ್ದ. ಇದು ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು, ಈ ಸಮಯದಲ್ಲಿ ಅಕ್ಷಯ್ ಭಲೇರಾವ್ ಅವರನ್ನು ಹೊಡೆದು, ಇರಿದು ಕೊಲ್ಲಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಆತನ ಸಹೋದರನಿಗೂ ಥಳಿಸಲಾಗಿದೆ.

Advertisement

ಅಕ್ಷಯ್ ಭಲೇರಾವ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ದಾಖಲಿಸುವ ಮೊದಲು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೊಲೆ, ಕೊಲೆ ಯತ್ನ, ಗಲಭೆ ಮತ್ತು ಹಲ್ಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next