Advertisement
ಸಾಮಾಜಿಕ ಜಾಲತಾಣಗಳ ವ್ಯಸನದಿಂದ ಕೆಲಸಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮನೀಶ್ ಸೇಥಿ ಈ ಉಪಾಯ ಹೂಡಿದ್ದಾರೆ. ಸೇಥಿ ಕಂಪ್ಯೂಟರ್ ಪ್ರೋಗ್ರಾಮರ್. 2012ರಲ್ಲಿ ಅತೀ ಹೆಚ್ಚು ಫೇಸ್‌ಬುಕ್ ಬಳಸುತ್ತಿದ್ದರಂತೆ. ಪ್ರತೀ ವಾರ ತಮ್ಮ ಕೆಲಸದ ಅವಧಿಯಲ್ಲಿ ಶೇ. 38ರಷ್ಟು ಭಾಗ ಇದರಲ್ಲೇ ಕಳೆಯುತ್ತಿದ್ದರಂತೆ. ಇದರಿಂದ ತಮ್ಮ ಕೆಲಸದ ಸಾಮರ್ಥ್ಯ ಕುಗ್ಗಿದ್ದನ್ನು ಗಮನಿಸಿದ ಅವರು, ತಮ್ಮ ಕೆನ್ನೆಗೆ ಹೊಡೆಯಲೆಂದು ಕ್ಲಾರಾ ಎಂಬ ಮಹಿಳೆ ಯನ್ನು ನೇಮಿಸಿಕೊಂಡಿದ್ದಾರೆ. ಕೆಲಸದ ಅವಧಿಯಲ್ಲಿ ಮನೀಶ್ ಸಾಮಾಜಿಕ ಜಾಲತಾಣ ತೆರೆದಾಗೆಲ್ಲ ಅವರಿಗೆ ಕಪಾಳಮೋಕ್ಷ ಮಾಡುವ ಕೆಲಸ ಕ್ಲಾರಾರದು. ಕ್ಲಾರಾಗೆ ಗಂಟೆಗೆ 595 ರೂ. ಸಂಬಳ ನಿಗದಿ ಮಾಡಲಾಗಿದೆ.
Related Articles
Advertisement
ಉತ್ಪಾದಕತೆ ಮೇಲೆ ಪರಿಣಾಮ :
ಸಾಮಾಜಿಕ ಮಾಧ್ಯಮಗಳ ಅವಿರತ ಬಳಕೆ ಉತ್ಪಾದಕತೆಯ ಮೇಲೆ ನಕಾ ರಾತ್ಮಕ ಪರಿಣಾಮ ಬೀರುತ್ತದೆ ಎಂಬು ದನ್ನು ಹಲವು ಅಧ್ಯಯನ ಗಳು ಸಾಬೀತುಪಡಿಸಿವೆ. ಒಂದು ವರದಿಯ ಪ್ರಕಾರ, ಶೇ. 83ರಷ್ಟು ಉದ್ಯೋಗಿಗಳು ಕೆಲಸದ ಸಮಯ ದಲ್ಲಿ ಫೇಸ್‌ಬುಕ್ ನೋಡುತ್ತಾರೆ. ಪ್ರತೀ ದಿನ ನೌಕರರು ತಮ್ಮ ಕೆಲಸದ ಅವಧಿಯ ಶೇ. 32ರಷ್ಟು ಸಮಯವನ್ನು ಸಾಮಾಜಿಕ ಜಾಲ ತಾಣ ಗಳಲ್ಲೇ ಕಳೆಯುತ್ತಾರೆ.