ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ (ಐಜಿಐ) ನಿಲ್ದಾಣಕ್ಕೆ ಬ್ಯಾಂಕಾಕ್ ನಿಂದ ಬಂದಿಳಿದ ಪ್ರಯಾಣಿಕರೊಬ್ಬರ ಬಳಿ ಇದ್ದ 2 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಮಂಗಳವಾರ (ನವೆಂಬರ್ 21) ತಿಳಿಸಿದ್ದಾರೆ.
ಇದನ್ನೂ ಓದಿ:Kushtagi: ತೆರವು ಹಂತದಲ್ಲಿದ್ದ ಶಾಲೆಗೆ ತಹಶೀಲ್ದಾರ್ ಭೇಟಿ; ತೆರವಿಗೆ ತಾತ್ಕಾಲಿಕ ಬ್ರೇಕ್
ಬ್ಯಾಂಕಾಕ್ ನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವ್ಯಕ್ತಿಯ ಬ್ಯಾಗ್ ತಪಾಸಣೆ ನಡೆಸಿದಾಗ ಎರಡು ಜ್ಯೂಸ್ ಪ್ಯಾಕೆಟ್ ಸಿಕ್ಕಿದ್ದು, ಅದು ದ್ರವರೂಪದ ಬದಲು ಸ್ವಲ್ಪ ಭಾರವಾಗಿದ್ದರಿಂದ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ತೆರೆದು ನೋಡಿದಾಗ ಅಚ್ಚರಿಗೊಳಗಾಗಿದ್ದರು. ಯಾಕೆಂದರೆ ಎರಡು ಪ್ಯಾಕೇಟ್ ನಲ್ಲಿ ಬರೋಬ್ಬರಿ 2.24 ಕೋಟಿ ರೂಪಾಯಿ ಮೌಲ್ಯದ 4.204 ಕೆಜಿ ಚಿನ್ನದ ಬಿಸ್ಕತ್ ಇದ್ದಿರುವುದು ಪತ್ತೆಯಾಗಿದೆ.
ವ್ಯಕ್ತಿಯನ್ನು 1962ರ ಕಸ್ಟಮ್ಸ್ ಕಾಯ್ದೆಯ ಪ್ರಕಾರ ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಕಸ್ಟಮ್ಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.