Advertisement

ರೈಲಿನಲ್ಲಿ ಸೊತ್ತು ಕಳಕೊಂಡ ಪ್ರಯಾಣಿಕನಿಗೆ 1.65 ಲಕ್ಷ ಪರಿಹಾರ

11:53 AM Mar 20, 2018 | Team Udayavani |

ಥಾಣೆ : ಕೊಂಕಣ್‌ ರೈಲ್ವೇ ಪ್ರಯಾಣದ ವೇಳೆ ತನ್ನ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡಿದ್ದ ಪ್ರಯಾಣಿಕನಿಗೆ 1.65 ಲಕ್ಷ ರೂ. ಪರಿಹಾರ ನೀಡುವಂತೆ ಥಾಣೆಯ ಬಳಕೆದಾರರ ನ್ಯಾಯಾಲಯ ಕೊಂಕಣ್‌ ರೈಲ್ವೇ ಕಾರ್ಪೋರೇಶನ್‌ಗೆ ಆದೇಶ ನೀಡಿದೆ.

Advertisement

ರೈಲು ಪ್ರಯಾಣದ ವೇಳೆ, ಪ್ರಯಾಣಿಕರಿಗೆ ಮತ್ತು ಅವರ ಸೊತ್ತುಗಳಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡುವುದು ರೈಲ್ವೆ ಆಡಳಿತೆಯ ಕರ್ತವ್ಯ ಎಂದು ಹೇಳಿದ ಥಾಣೆಯ ಹೆಚ್ಚುವರಿ ಜಿಲ್ಲಾ ಬಳಕೆದಾರರ ವೇದಿಕೆ ಅಧ್ಯಕ್ಷ ಎ ಝಡ್‌ ತೇಲಗೋಟೆ ಮತ್ತು ಸದಸ್ಯ ತ್ರ್ಯಂಬಕ ಎ ಥೂಳ್‌ ಅವರು ದೂರುದಾರ ರೈಲು ಪ್ರಯಾಣಿಕನಾಗಿರುವ ಥಾಣೆ ಜಿಲ್ಲೆಯ ಉಲ್ಲಾಸನಗರ ನಿವಾಸಿ ವಿನೋದ್‌ ನಾಯಕ್‌ ಅವರಿಗೆ 1.65 ಲಕ್ಷ ರೂ. ಪರಿಹಾರ ನೀಡುವಂತೆ ಕೊಂಕಣ್‌ ರೈಲ್ವೇ ಕಾರ್ಪೊರೇಶನ್‌ ಗೆ ಆದೇಶಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next