Advertisement

ಮೂರು ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ದುರುಳ: ಪೊಲೀಸರಿಂದ ಆರೋಪಿಯ ಬಂಧನ

09:53 AM Jan 06, 2020 | Team Udayavani |

ಗುಜರಾತ್: 3 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ದುರುಳನೊಬ್ಬನನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

Advertisement

ಡಿಸೆಂಬರ್ 28 ರಂದು ಮನೆಯ ಬಳಿಯಿಂದ 3 ವರ್ಷದ ಬಾಲೆ ಕಾಣೆಯಾಗಿದ್ದಳು. ಪೊಲೀಸರ ಪ್ರಕಾರ ನೆರೆಮನೆಯಾತನೆ ಬಾಲಕಿಗೆ ಅಮೀಷ ತೋರಿಸಿ ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿದ್ದ. ಆ ಕುರಿತು ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು.

ಆದರೇ ಒಂದು ದಿನದ ಬಳಿಕ ಬಾಲೆಯನ್ನು ಮನೆಯ ಸಮೀಪವೇ ಬಿಟ್ಟು ನೆರೆಮನೆಯಾತ ಅಲ್ಲಿಂದ ಪರಾರಿಯಾಗಿದ್ದು, ಬಾಲೆಯ ದೇಹದ ಮೇಲಿದ್ದ ತೀವ್ರ ತರದ ಗಾಯಗಳನ್ನು ಕಂಡು ಮತ್ತೊಮ್ಮೆ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಗಿಳಿದ ಅಹಮದಾಬಾದ್ ಪೊಲೀಸರು ಶನಿವಾರ ನೆರೆಮನೆಯಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ಧಾರೆ.

Advertisement

Udayavani is now on Telegram. Click here to join our channel and stay updated with the latest news.

Next