Advertisement

ಕಾಣಿಯೂರು: ಬಾಲಕನ ಪ್ರಾಣ ಕಸಿದ ಪೇರಳೆ ಆಸೆ!

11:04 AM Mar 18, 2022 | Team Udayavani |

ಕಾಣಿಯೂರು: ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಪೇರಳೆ ಮರ ಹತ್ತಲು ಹೋಗಿ ಉರುಳಿ ಬಿದ್ದು ಮೃತಪಟ್ಟ ಧಾರುಣ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ಮಾ.17ರ ಸಂಜೆ ನಡೆದಿದೆ.

Advertisement

ದೋಳ್ಪಾಡಿ ಮರಕ್ಕಡ ನಿವಾಸಿ ದಿವಾಕರ ಗೌಡ ಎಂಬವರ ಪುತ್ರ ಉಲ್ಲಾಸ್ ಡಿ.ಎಂ (8 ವ.) ಮೃತ ಬಾಲಕ.

ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಉಲ್ಲಾಸ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ.

ಇದನ್ನೂ ಓದಿ:ಪೊಲೀಸರಿಂದ ಮೋಸ ಆರೋಪ: ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ

ಉಲ್ಲಾಸ್ ಎಂದಿನಂತೆ ಮಾ.17ರಂದು ಕೂಡ ಶಾಲೆಗೆ ಹೋಗಿದ್ದು ಸಂಜೆ ಮನೆಗೆ ಹಿಂತಿರುಗಿದ್ದಾನೆ. ಮನೆಗೆ ಬಂದ ಬಳಿಕ ಮನೆ ಸಮೀಪದ ಪೇರಳೆ ಹಣ್ಣು ಕೊಯ್ಯಲು ಮರಕ್ಕೆ ಹತ್ತಿದ್ದು ಈ ವೇಳೆ ಅಯತಪ್ಪಿ ಕೆಳಕ್ಕೆ ಉರುಳಿದಾಗ ಕೆನ್ನೆಯ ಭಾಗಕ್ಕೆ ಏಟಾಗಿ ಮೃತಪಟ್ಟಿದ್ದಾನೆ.

Advertisement

ಮೃತ ಉಲ್ಲಾಸ್ ತಂದೆ ದಿವಾಕರ್, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next