Advertisement

Police Harassment: ಖಾಕಿ ಕಿರುಕುಳಕ್ಕೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

12:33 PM Sep 21, 2023 | Team Udayavani |

ಬೆಂಗಳೂರು: ವೈಯಾಲಿಕಾವಲ್‌ ಠಾಣೆ ಪೊಲೀಸರ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಕೇಳಿ ಬಂದಿದೆ.

Advertisement

ತಲಘಟ್ಟಪುರದ ನಾಗ ರಾಜ್‌(47) ಮೃತಪಟ್ಟವರು.

ಸನಾವುಲ್ಲಾ ಎಂಬಾ ತನ ಒಡೆತನದಲ್ಲಿರುವ ಇಪಿಪಿ (ಎನ್‌ ವೇರ್‌ವೆುಂಟ್‌ ಪೊಲೂಷನ್‌ ಪ್ರಾಜೆಕ್ಟ್) ಕಂಪನಿಯಲ್ಲಿ ನಾಗರಾಜ್‌ ಕೆಲಸ ಮಾಡುತ್ತಿದ್ದ. ಈ ಕಂಪನಿಯ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವುದಾಗಿ ನಟರಾಜ್‌ ಎಂಬುವವರು ವೈಯಾಲಿಕಾವಲ್‌ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದರು. ಆದರೆ, ಹಲವು ಜನರಿಂದ ಹಣ ಪಡೆದು ವಂಚಿಸಿರುವ ಕಂಪನಿ ಮಾಲೀಕ ಸನಾವುಲ್ಲಾ ಬದಲಾಗಿ ನಾಗರಾಜ್‌‌ರನ್ನು ಪೊಲೀಸರು ಕರೆದೊಯ್ದು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಇದರಿಂದ ನೊಂದ ನಾಗರಾಜ್‌ 2 ಪುಟ ಡೆತ್‌ನೋಟ್‌ ಬರೆದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್‌ಸ್ಪೆಕ್ಟರ್‌ ಸೇರಿ ಐವರ ವಿರುದ್ಧ ಎಫ್ಐಆರ್‌: ನಾಗರಾಜ್‌ ಅವರ ಪತ್ನಿ ವಿನುತಾ ಕೊಟ್ಟ ದೂರಿನ ಆಧಾರದ ಮೇಲೆ ಸನಾವುಲ್ಲಾ, ನಟರಾಜ್‌, ಈರೇಗೌಡ, ವೈಯಾಲಿಕಾವಾಲ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಹಾಗೂ ಹೆಣ್ಣೂರು ಪೊಲೀಸ್‌ ಸಿಬ್ಬಂದಿ ಶಿವಕುಮಾರ್‌ ವಿರುದ್ಧ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಖಾಸಗಿ ಕಂಪನಿಯಲ್ಲಿ ಟೀಮ್‌ ಲೀಡರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಪತಿ ನಾಗರಾಜ್‌ ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ನಿಷಿಯನ್‌ ಕೆಲಸ ಮಾಡಿ ಕಳೆದ 2 ವರ್ಷಗಳ ಹಿಂದೆ ವಾಲೆಂಟರಿ ರಿಟೈರ್‌ವೆುಂಟ್‌ ಪಡೆದಿದ್ದರು. ಆತ್ಮಹತ್ಯೆಗೂ ಮುನ್ನ ನನ್ನ ವಾಟ್ಸ್‌ಆ್ಯಪ್‌ಗೆ ಡೆತ್‌ನೋಟ್‌ ಕಳಿಸಿದ್ದರು. ನನ್ನ ಸಾವಿಗೆ ಈ ಐವರು ಕಾರಣ ಎಂದು ತಿಳಿಸಿದ್ದಾರೆ.

ಹೆಣ್ಣೂರು ಪೊಲೀಸ್‌ ಠಾಣೆಯ ಶಿವಕುಮಾರ್‌ಗೆ 8 ಲಕ್ಷ ರೂ. ನೀಡಿದ್ದೇನೆ. ದೇವಾರಾಜ್‌ ಎಂಬುವವರಿಗೆ 9 ಲಕ್ಷ ರೂ. ಕೊಡಬೇಕು. ದಯವಿಟ್ಟು ನನ್ನನ್ನು ಕ್ಷಮಿಸು ಎಂದು ಹೇಳಿದ್ದರು. ಹೀಗಾಗಿ ನಾಗರಾಜ್‌ ಆತ್ಮಹತ್ಯೆಗೆ ಕಾರಣವಾದ ಐವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ.

Advertisement

ಬೆಲ್ಟ್, ಬ್ಯಾಟ್‌, ಶೂ ಏಟು: ಡೆತ್‌ನೋಟ್‌ನಲ್ಲಿ ಉಲ್ಲೇಖ: ವೈಯಾಲಿಕಾವಲ್‌ ಪೊಲೀಸರು ಬೆಲ್ಡ್‌ನಿಂದ ಹಲ್ಲೆ ನಡೆಸಿದ್ದಾರೆ. ಸಾಲದಕ್ಕೆ ಬ್ಯಾಟ್‌ನಿಂದ ಬಡಿದು, ಶೂನಿಂದ ಒದ್ದಿದ್ದರು ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ. ವೈಯಾಲಿ ಕಾವಲ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌, ಇಪಿಪಿ ಕಂಪನಿ ಮಾಲೀಕ ಸನಾವುಲ್ಲಾ, ನಟರಾಜ್‌, ಎಂ.ಸಿ ಯೆರ್ರೆಗೌಡ ಹೆಸರನ್ನೂ ಉಲ್ಲೇಖೀಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next