ಬೆಳಗಾವಿ: ಸಮೀಪದ ಶಿರೂರ ಡ್ಯಾಂ ನಲ್ಲಿ ಈಜಲು ಹೋಗಿದ್ದ ಯುವಕನೋರ್ವ ಶನಿವಾರ ನೀರು ಪಾಲಾಗಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಯುವಕನ ಕುಟುಂಬಸ್ಥರು ದೂರು ನೀಡಿದರೂ ಕಾರ್ಯಾಚರಣೆ ನಡೆಸಲು ಇನ್ನೂ ಪೊಲೀಸರು ಸ್ಥಳಕ್ಕೆ ಬಾರದಿರುವುದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗೋಕಾಕ ತಾಲೂಕಿನ ಮಲಾಮರಡಿ ಗ್ರಾಮದ ದರ್ಶನ ಸುಂದರ ಸಾಮಾನಗಡ (20) ಎಂಬ ಯುವಕ ನೀರು ಪಾಲಾಗಿದ್ದು, ಕಾರ್ಯಾಚರಣೆ ನಡೆಸಲು ಒಬ್ಬರು ಪೊಲೀಸ್ ಸಿಬ್ಬಂದಿ ಬಂದಿಲ್ಲ ಎಂಬುದು ಸಂಬಂಧಿಕರ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಮಂಗಳೂರು: ಕೊಲೆ ಯತ್ನ ಪ್ರಕರಣ; 12 ಗಂಟೆಯೊಳಗೆ ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು
ಬೆಳಗಾವಿಯ ತನ್ನ ಸ್ನೇಹಿತರೊಂದಿಗೆ ಯುವಕ ದರ್ಶನ್ ಈಜಲು ಹೋಗಿದ್ದ. ಆದರೆ ನೀರಿಗೆ ಇಳಿದಿದ್ದ ದರ್ಶನ್ ವಾಪಸ್ ಮರಳದೆ ನೀರು ಪಾಲಾಗಿದ್ದಾನೆ. ಈ ಬಗ್ಗೆ ಕುಟುಂಬಸ್ಥರು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿಯೇ ದೂರು ನೀಡಿದ್ದಾರೆ. ಆದರೆ ರವಿವಾರ ಬೆಳಗ್ಗೆ 11 ಗಂಟೆಯಾದರೂ ಒಬ್ಬರೂ ಪೊಲೀಸರು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಲು ಮುಂದಾಗುತ್ತಿಲ್ಲ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.