ಉತ್ತರಪ್ರದೇಶ: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವಿಪರೀತವಾಗಿ ಏರಿಕೆ ಕಂಡಿದೆ, ಅದರಲ್ಲೂ ಕಾರಿಗೆ ಸಿಲುಕಿ ದೇಹವನ್ನು ಕಿಲೋಮೀಟರ್ ಗಟ್ಟಲೆ ಎಳೆದೊಯ್ಯುವ ಸನ್ನಿವೇಶ ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ ಅಂತದ್ದೇ ಇನ್ನೊಂದು ಘಟನೆ ಉತ್ತರಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
ವ್ಯಕ್ತಿಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಸುಮಾರು ಹತ್ತು ಕಿಲೋಮೀಟರ್ ದೂರ ಎಳೆದೊಯ್ದ ಭಯಾನಕ ಘಟನೆ ಉತ್ತರಾಪದೇಶದ ಮಥುರಾ ಬಳಿ ಯಮುನಾ ಏಕ್ಸ್ ಪ್ರೆಸ್ ವೇ ನಲ್ಲಿ ಸಂಭವಿಸಿದೆ.
ಘಟನೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು ವ್ಯಕ್ತಿಯ ಗುರುತು ಪತ್ತೆಹಚ್ಚುವ ಕೆಲಸ ಪ್ರಗತಿಯಲ್ಲಿದೆ.
ಕಳೆದ ಎರಡು ದಿನಗಳಿಂದ ದಟ್ಟ ಮಂಜು ಆವರಿಸಿದ ವಾತಾವರಣ ಉತ್ತರ ಪ್ರದೇಶ ಸುತ್ತಮುತ್ತ ಕಂಡುಬಂದಿದ್ದು ದೆಹಲಿ ನಿವಾಸಿ ವೀರೇಂದ್ರ ಸಿಂಗ್ ಅವರು ಮುಂಜಾನೆ 4 ಗಂಟೆ ಸುಮಾರಿಗೆ ಆಗ್ರಾದಿಂದ ನೋಯ್ಡಾಗೆ ಕಾರು ಚಾಲನೆ ಮಾಡುತ್ತಿದ್ದಾಗ ಯಮುನಾ ಎಕ್ಸ್‌ಪ್ರೆಸ್‌ವೇಯ ಮಥುರಾ ಬಳಿಯ ಟೋಲ್ ಬೂತ್‌ನಲ್ಲಿ ಅವರ ಕಾರಿನ ಅಡಿಯಲ್ಲಿ ದೇಹ ಸಿಲುಕಿಕೊಂಡಿರುವುದು ಭದ್ರತಾ ಸಿಬ್ಬಂದಿಯು ಗಮನಿಸಿದ್ದಾರೆ. ಕೂಡಲೇ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನಡಿ ವ್ಯಕ್ತಿ ಸಿಲುಕಿಕೊಂಡಿರುವುದು ದೃಢ ಪಟ್ಟಿದೆ ಈ ವೇಳೆಗಾಗಲೇ ವ್ಯಕ್ತಿಯ ದೇಹ ಪೂರ್ತಿ ಛಿದ್ರಗೊಂಡಿತ್ತು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ದೆಹಲಿಯ ಪೊಲೀಸರು ಕಾರು ಚಾಲಕ ವೀರೇಂದ್ರ ಸಿಂಗ್ ನನ್ನ ವಶಕ್ಕೆ ಪಡೆದಿದ್ದು ವಿಚಾರಣೆ ವೇಳೆ ದಟ್ಟ ಮಂಜಿನಿಂದಾಗಿ ಕಾರು ಡಿಕ್ಕಿ ಹೊಡೆದಿರುವುದೇ ನನಗೆ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಡೆಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಐಪಿಎಲ್ ಆಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ, ಆದರೆ..; ಚೇತೇಶ್ವರ ಪೂಜಾರ