ಬಂಟ್ವಾಳ: ಕಳೆದ ಫೆಬ್ರವರಿ ಫೆ. 14ರಂದು ಮೊಗರ್ನಾಡಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನರಿಕೊಂಬು ಗ್ರಾಮ ಅಂತರ ನಿವಾಸಿ ಧರ್ಣಪ್ಪ ಕುಲಾಲ್ (74) ಅವರು ಜೂ. 30ರಂದು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ರಸ್ತೆ ದಾಟಲು ನಿಂತಿದ್ದ ಅವರಿಗೆ ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸುದೀರ್ಘ ಸಮಯ ಚಿಕಿತ್ಸೆಯ ಬಳಿಕವೂ ಆರೋಗ್ಯದಲ್ಲಿ ಸುಧಾರಣೆ ಇಲ್ಲದ ಕಾರಣ ತಿಂಗಳ ಹಿಂದೆ ಮನೆಗೆ ಕರೆದುಕೊಂಡು ಬರಲಾಗಿತ್ತು.
ಘಟನೆಯ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಜನೆ ಸಂಕೀರ್ತನೆಕಾರರಾಗಿದ್ದ ಅವರು ನರಿಕೊಂಬು ಅಂತರ ರಾಮನಗರ ಶ್ರೀ ಕೋದಂಡರಾಮ ಭಜನ ಮಂದಿರದ ಸಂಸ್ಥಾಪಕರಾಗಿದ್ದರು.
ಅಂತರ ಶ್ರೀ ನಾಲ್ಕೈತ್ತಾಯ ಪಂಜುರ್ಲಿ ದೈವಸ್ಥಾನದ ನಿತ್ಯ ಚಾಕರಿದಾರರಾಗಿದ್ದು, ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು.