Advertisement

Tirupati: ತಿರುಪತಿ ದೇವಸ್ಥಾನದ ಕಂಟ್ರೋಲ್‌ ರೂಮ್‌ಗೆ ಬಾಂಬ್‌ ಬೆದರಿಕೆ ಕರೆ; ವ್ಯಕ್ತಿ ಬಂಧನ

10:45 AM Aug 20, 2023 | Suhan S |

ಆಂಧ್ರಪ್ರದೇಶ: ಬಾಂಬ್‌ ಸ್ಪೋಟಿಸಿ ತಿರುಪತಿ ದೇವಸ್ಥಾನದ ಭಕ್ತರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಶನಿವಾರ (ಆ.19 ರಂದು) ಬಂಧಿಸಿದ್ದಾರೆ.

Advertisement

ತಮಿಳುನಾಡಿನ ಸೇಲಂ ಮೂಲದ ಬಿ ಬಾಲಾಜಿ (39) ಬಂಧಿಸಲಾಗಿದೆ. ಈತ   ಆಗಸ್ಟ್ 15 ರಂದು ಬೆಳಿಗ್ಗೆ 11.25 ರ ಸುಮಾರಿಗೆ ತಿರುಮಲ ತಿರುಪತಿ ದೇವಸ್ಥಾನ ಕಂಟ್ರೋಲ್‌ ರೂಮ್‌ ಗೆ ಕರೆ ಮಾಡಿ, ಬಾಂಬ್‌ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ. ತಿರುಮಲ ತಿರುಪತಿ ದೇವಸ್ಥಾನದ ಅಲಿಪಿರಿಯ ಕಂಟ್ರೋಲ್ ರೂಂಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಕಂಟ್ರೋಲ್‌ ರೂಮ್‌ ನ ಲ್ಯಾಂಡ್‌ ಲೈನ್‌ ಗೆ ಕರೆ ಮಾಡಿದ್ದ ವ್ಯಕ್ತಿ, ಮಧ್ಯಾಹ್ನ 3 ಗಂಟೆಗೆ ಅಲಿಪಿರಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಸಿದ್ದು,100 ಭಕ್ತರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿ ತಿಳಿಸಿದೆ.

ಬೆದರಿಕೆ ಕರೆಬಂದ ಕೂಡಲೇ ಎಚ್ಚೆತ್ತ ಪೊಲೀಸರು ಅಲಿಪಿರಿ ಚೆಕ್‌ಪೋಸ್ಟ್‌ನಲ್ಲಿ ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಆದರೆ, ಭದ್ರತಾ ತಪಾಸಣೆ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ದೂರವಾಣಿ ಕರೆ ಕುರಿತು ಟಿಟಿಡಿಯ ವಿಜಿಲೆನ್ಸ್ ತಂಡ ಪೊಲೀಸರಿಗೆ ದೂರು ನೀಡಿದ ನಂತರ ಕರೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದು, ಹುಸಿ ಬೆದರಕೆ ಕರೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿ ಬಾಲಾಜಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಬಾಂಬ್ ಕರೆ ಮಾಡಿದ್ದನ್ನು ಆರೋಪಿ ಶನಿವಾರ ತಪ್ಪೊಪ್ಪಿಕೊಂಡಿದ್ದು, ಆ ಬಳಿಕ ಆತನನ್ನು ಬಂಧಿಸಲಾಗಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next