ನವದೆಹಲಿ : ಕಳೆದ ಶುಕ್ರವಾರ ಐಸ್ ಲ್ಯಾಂಡ್ ನಲ್ಲಿ ಭಾರೀ ಪ್ರಮಾಣದ ಜ್ವಾಲಾಮುಖಿ ಸಂಭವಿಸಿದೆ. ಕಳೆದ 800 ವರ್ಷಗಳಿಂದ ಶಾಂತವಾಗಿದ್ದ ರೇಕ್ ಜನೆಸ್ ಪೆನಿನ್ಸುಲಾದ ಜ್ವಾಲಾಮುಖಿ ಈ ಬಾರಿ ಲಾವಾ ರಸವನ್ನು ಹೊರ ಹಾಕಿದೆ. ಇಲ್ಲಿ ನಡೆದಿರುವ ಜ್ವಾಲಾಮುಖಿಯಿಂದ ಯಾವುದೇ ಹಾನಿಯಾಗಿಲ್ಲ. ಬದಲಾಗಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಜ್ವಾಲಾಮುಖಿಯ ಹರಿವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹಾಗೆ ಇಲ್ಲಿಗೆ ಬಂದ ಪ್ರವಾಸಿಗರು ಆ ಲಾವಾ ರಸದ ಶಾಖದಲ್ಲಿಯೇ ಆಹಾರವನ್ನು ಬೇಯಿಸಿಕೊಂಡು ತಿಂದಿದ್ದಾರೆ. ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದಾರೆ.
ಒಂದು ವರದಿಯ ಪ್ರಕಾರ, ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣುವುದು ವಿಜ್ಞಾನಿಗಳ ತಂಡ. ಇವರು ಜ್ವಾಲಾಮುಖಿ ಸ್ಪೋಟದ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದಾರೆ. ಅಲ್ಲಿರುವ ಲಾವಾ ರಸದ ಮೇಲೆ ಹಾಟ್ ಡಾಗ್ ಗಳನ್ನು ಬೇಯಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಇನ್ನು ಸಾಸೇಜ್‌ಗಳನ್ನು ಬಿಸಿ ಮಾಡಲು ಕೂಡ ಲಾವಾ ರಸದ ಹಬೆಯನ್ನು ಬಳಸಿಕೊಂಡಿದ್ದಾರೆ. ಇದರಿಂದ ಗೊತ್ತಾಗುತ್ತದೆ ಆ ಜ್ವಾಲಾಮುಖಿಯಿಂದ ಹೊರ ಬಂದಿರುವ ಲಾವಾರಸದ ಶಾಖ ಎಷ್ಟಿದೆ ಎಂದು.
ಇಲ್ಲಿ ಸಂಭವಿಸಿರುವ ಸ್ಫೋಟವನ್ನು ಅಲ್ಲಿನ ಹವಾಮಾನ ಇಲಾಖೆ ತುಂಬಾ ಸಣ್ಣದು ಎಂದು ಪರಿಗಣಿಸಿದೆ. ಅಲ್ಲದೆ ಆ ಭಾಗದ ಜನರಿಗೆ ಯಾವುದೇ ಹಾನಿ ಮಾಡಿಲ್ಲ ಅಂತಾನೂ ಹೇಳಿದೆ.