Advertisement

ಟಿಕ್ ಟಾಕ್ ನಲ್ಲಿ ವೀಡಿಯೋ ಅಪ್ಲೋಡ್ ಮಾಡಿ ನೇಣಿಗೆ ಶರಣು

09:59 AM Feb 08, 2020 | keerthan |

ದಾವಣಗೆರೆ: ಕೌಟಂಬಿಕ ಕಲಹ ಹಿನ್ನಲೆ ವ್ಯಕ್ತಿಯೋರ್ವ ಟಿಕ್ ಟಾಕ್ ನಲ್ಲಿ ವೀಡಿಯೋ ಮಾಡಿಕೊಂಡು ನಂತರ ನೇಣಿಗೆ ಶರಣಾದ ಘಟನೆ ದಾವಣಗೆರೆಯ ಮಾಗನಹಳ್ಳಿ ಗ್ರಾಮದಲ್ಲಿ‌ ನಡೆದಿದೆ.

Advertisement

ನಾಗರಾಜು ಅಲಿಯಾಸ್ ರಾಜು (34) ನೇಣು ಬಿಗಿದುಕೊಂಡು ಸಾವನ್ನಪ್ಪಿದ ವ್ಯಕ್ತಿ.

ನಾಗರಾಜ್ ಟಿಕ್ ಟಾಕ್ ನಲ್ಲಿಯೇ ಕಾಲ ಕಳೆಯುತ್ತಿದ್ದು. ಹೆಂಡತಿಯ ಜೊತೆ ಜಗಳ ಮಾಡಿಕೊಂಡು ದೂರವಾಗಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಮದ್ಯಪಾನ ದಾಸನಾಗಿದ್ದರು.

ಕಳೆದ ಮೂರು ದಿನಗಳ ಹಿಂದೆ ನೇಣು ಬಿಗಿದುಕೊಂಡಂತೆ ವೀಡಿಯೋ  ಮಾಡಿ ಇದನ್ನು ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಮಾಡಿ ನಂತರ ನೇಣು ಹಾಕಿಕೊಂಡಿದ್ದಾನೆ. ನೇಣು ಬಿಗಿದುಕೊಂಡ ವೀಡಿಯೋ ಟಿಕ್ ಟಾಕ್ ನಲ್ಲಿ ಈಗ ಸಾಕಷ್ಟು ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next