Advertisement

ಸುಮ್ ಸುಮ್ನೆ ಕೋವಿಡ್ ಚೆಕ್ ಮಾಡಿದ್ರೆ ಸರಿ ಇರಲ್ಲ, ನನಗೆ ಡಿಸಿ ಗೊತ್ತು: ವ್ಯಕ್ತಿಯಿಂದ ರಂಪಾಟ

01:42 PM May 14, 2021 | Team Udayavani |

ಕೊಡಗು: ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ದಿನ ನಿತ್ಯ ಏರುತ್ತಲೇ ಇದೆ. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ, ಆದ್ರೆ ಇಲ್ಲೊಬ್ಬ ವ್ಯಕ್ತಿ ನರ್ಸ್ ಮೇಲೆಯೇ ಹರಿಹಾಯ್ದಿದ್ದಾನೆ. ವ್ಯಕ್ತಿಯೋರ್ವ ಸ್ವ್ಯಾಬ್ ಕಲಕ್ಷನ್​ ಗೆ ಬಂದ ಆರೋಗ್ಯ ಸಿಬ್ಬಂದಿ ಎದುರು ನಾನು ಸ್ವಾಬ್​ ಟೆಸ್ಟ್​ ಕೊಡುವುದಿಲ್ಲ ಅಂತ ರಂಪಾಟ ಮಾಡಿದ್ದಾನೆ. ಈ ಘಟನೆಯು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ನಡೆದಿದೆ.

Advertisement

ಕಾಂಟ್ರ್ಯಾಕ್ಟರ್ ರವಿ ಎಂಬುವ ವ್ಯಕ್ತಿ ಮಾದಾಪುರ ಆರೋಗ್ಯ ಕೇಂದ್ರದ ನರ್ಸ್​ ಗ್ರೀಷ್ಮಾಗೆ ಬಾಯಿಗೆ ಬಂದಂತೆ  ಮಾತನಾಡಿದ್ದಾನೆ. ಅಷ್ಟೇ ಅಲ್ಲದೇ ಅಲ್ಲಿದ್ದ ಎಲ್ಲಾ ಆರೋಗ್ಯ ಸಿಬ್ಬಂದಿಯವರೊಂದಿಗೆ ವಾಗ್ವಾದ ನಡೆಸಿದ್ದಾನೆ. ನಾನ್​ ಯಾರು ಗೊತ್ತಾ..? ನನಗೆ ಡಿಸಿ ಗೊತ್ತು, ಎಸ್​ಪಿ ಗೊತ್ತು ಅಂತ ನರ್ಸ್​ಗೆ ಅವಾಜ್​ ಹಾಕಿದ್ದಾನೆ.

ಹೊಟ್ಟೆ ನೋವು ಅಂತ ಬಂದವರಿಗೆ ನೀವು ಪಾಸಿಟಿವ್ ವರದಿ ನೀಡುತ್ತೀರಿ. ನನಗೆ ಪ್ರಾಬ್ಲಮ್ ಇದ್ದರೆ ನಾನೇ ಬಂದು ನಿಮಗೆ ತಿಳಿಸುತ್ತೇನೆ. ಆಶಾ ಕಾರ್ಯಕರ್ತೆಯರು ಹೇಳಿದರು ಅಂತ ನಮ್ಮ ಮನೆ ಬಳಿ ಬಂದರೆ ಸರಿ ಇರುವುದಿಲ್ಲ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next