ಇಸ್ಲಾಮಾಬಾದ್: ಪವಿತ್ರ ಕುರಾನ್ ಗ್ರಂಥಕ್ಕೆ ಬೆಂಕಿ ಹಚ್ಚಿದ್ದರಿಂದ ಆಕ್ರೋಶಗೊಂಡ ಜನರ ಗುಂಪು ವ್ಯಕ್ತಿಯೊಬ್ಬನನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಈಶಾನ್ಯ ಪಾಕಿಸ್ತಾನದ ಖೈಬರ್ ಪಖ್ತುನ್ ಖಾವಾದ ಸ್ವಾತ್ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Raichur; ನೀಟ್ ಪರೀಕ್ಷೆ ಅಕ್ರಮ ಮೋದಿ ಸರ್ಕಾರದ ದೊಡ್ಡ ಹಗರಣ: ಡಾ.ಶರಣಪ್ರಕಾಶ್ ಪಾಟೀಲ್
ಜನ ರೊಚ್ಚಿಗೆದ್ದು, ಹಿಂಸಾಚಾರ ನಡೆಸಿದ ಪರಿಣಾಮ ಸುಮಾರು ಎಂಟು ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್ ನ ಸಿಯಾಲ್ ಕೋಟ್ ನ ವ್ಯಕ್ತಿ ಗುರುವಾರ ರಾತ್ರಿ ಕುರಾನ್ ಗ್ರಂಥದ ಕೆಲವು ಪುಟಗಳಿಗೆ ಬೆಂಕಿ ಹಚ್ಚಿರುವುದಾಗಿ ಪೊಲೀಸ್ ಅಧಿಕಾರಿ ಝಾಹಿದುಲ್ಲಾ ಮಾಹಿತಿ ನೀಡಿದ್ದಾರೆ.
ಪೊಲೀಸ್ ಠಾಣೆಗೆ ಬೆಂಕಿ:
ಕುರಾನ್ ಗೆ ಬೆಂಕಿ ಹಚ್ಚಿದ ಆರೋಪದಡಿ ವ್ಯಕ್ತಿಯನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಜನರ ಗುಂಪು ಠಾಣೆ ಮೇಲೆ ದಾಳಿ ನಡೆಸಿ, ಆರೋಪಿಯನ್ನು ಹೊರಗೆ ಎಳೆದೊಯ್ದಿದ್ದರು. ನಂತರ ಠಾಣೆಗೆ ಬೆಂಕಿ ಹಚ್ಚಿ, ಆರೋಪಿಗೂ ಬೆಂಕಿ ಹಚ್ಚಿ ಕೊಂದಿರುವುದಾಗಿ ವರದಿ ವಿವರಿಸಿದೆ.
ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.