ಕ್ಯಾಲಿಫೋರ್ನಿಯಾ: ನೀವು ನಿಮ್ಮ ಮನದರಸಿಗೆ ಯಾವ ರೀತಿಯಲ್ಲಿ ಪ್ರಪೋಸ್ ಮಾಡುತ್ತೀರಿ ? ಇಲ್ಲೊಬ್ಬ ಯುವಕ ತನ್ನ ಗೆಳತಿಗೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಬೇಕೆಂದು ಆಲೋಚಿಸಿ ವಿಡಿಯೋ ಗೇಮ್ ಒಂದನ್ನು ಅಭಿವೃದ್ದಿಪಡಿಸಿ ಅದರ ಮೂಲಕ ಆಕೆಯನ್ನು ಇಂಪ್ರೆಸ್ ಮಾಡಿದ್ದಾನೆ.
ಡೆನಿಸ್ ವೆಲ್ಸ್ ಎಂಬ ಯುವಕ ಹಲವು ವರುಷಗಳಿಂದ ಶೈನೆ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೇ ಅದನ್ನು ನಿವೇದನೆ ಮಾಡಿಕೊಳ್ಳಲು ಆಗಿರಲಿಲ್ಲ. ಆ ಕಾರಣದಿಂದ ವಿಭಿನ್ನವಾಗಿ ಪ್ರಪೋಸ್ ಮಾಡಬೇಕೆಂದು ಆಲೋಚಿಸಿ 9 ತಿಂಗಳುಗಳ ಕಾಲ ಶ್ರಮ ಪಟ್ಟು 2D ವಿಡಿಯೋ ಗೇಮ್ ಒಂದನ್ನು ಅಭಿವೃದ್ಧಿ ಪಡಿಸಿದ್ದಾನೆ.
ಈ ವಿಡಿಯೋ ಗೇಮ್ 15 ನಿಮಿಷ ಗಳ ಕಾಲಾವಕಾಶ ಹೊಂದಿದ್ದು, ಇದರಲ್ಲಿ ಶೈನೆಯನ್ನು ಮೊದಲು ಭೇಟಿ ಮಾಡಿದ ಕ್ಷಣದಿಂದ ಹಿಡಿದು ಪ್ರಪೋಸ್ ಮಾಡುವರೆಗಿನ ಕ್ಷಣವನ್ನು ಆಕೆಯ ಪಾತ್ರವನ್ನೇ ಸೃಷ್ಟಿಸಿ ಅಭಿವೃದ್ಧಿಮಾಡಿದ್ದಾನೆ. ಆ ವಿಡಿಯೋ ‘ವಿಲ್ ಯು ಮ್ಯಾರಿ ಮೀ ? ”(ನನ್ನನ್ನು ಮದುವೆಯಾಗುತ್ತಿಯಾ) ಎಂಬ ನಿವೇದನೆಯೊಂದಿಗೆ ಕೊನೆಯಾಗುತ್ತದೆ.
ಶೈನೆ ಈ ವಿಡಿಯೋ ಗೇಮ್ ಅನ್ನು ಕಂಡು ಬೆರಗಾಗಿದ್ದು ಆತನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾಳೆ.