ಮಧ್ಯ ಪ್ರದೇಶ: 24 ವರ್ಷದ ಯುವಕನೊಬ್ಬ ತನ್ನ ಗೆಳತಿಯನ್ನು ಥಳಿಸಿರುವ ವಿಡಿಯೋ ವೈರಲ್ ಆಗಿರುವ ಘಟನೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಧೇರಾ ಗ್ರಾಮದ ಪಂಕಜ್ ತ್ರಿಪಾಠಿ ಎನ್ನುವ ಯುವಕ ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದ. ಪ್ರೀತಿಸುತ್ತಿದ್ದ 19 ವರ್ಷದ ಯುವತಿ ಬುಧವಾರ ತನ್ನ ಪಂಕಜ್ ಬಳಿ ಮದುವೆಯಾಗು ಎಂದಿದ್ದಾಳೆ. ಈ ಹಿಂದೆಯೂ ಇದೇ ಮಾತನ್ನು ಹಲವು ಬಾರಿ ಬಾರಿ ಯುವತಿ ಹೇಳಿದ್ದಳು. ಯಾವಾಗ ಮದುವೆಯಾಗುತ್ತೀಯಾ ಎಂದಿದ್ದಕ್ಕೆ ಈ ಸಲಿ ಪಂಕಜ್ ಸಿಟ್ಟೆದ್ದು ಯುವತಿಗೆ ಕೆನ್ನೆಗೆ ಹೊಡೆದಿದ್ದಾನೆ. ಇಷ್ಟು ಮಾತ್ರವಲ್ಲದೆ ಆಕೆಯನ್ನು ಕೆಳಗೆ ಹಾಕಿ ಕಾಲಿನಿಂದ ಥಳಿಸಿದ್ದಾನೆ.
ಈ ಘಟನೆಯ ವಿಡಿಯೋವನ್ನು ಯಾರೋ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ವೈರಲ್ ಆಗಿದೆ. ವೈರಲ್ ಆದ ವಿಡಿಯೋವನ್ನು ಪರಿಶೀಲಿಸಿ ಪೊಲೀಸರು ಪಂಕಜ್ ನನ್ನು ಬಂಧಿಸಿದ್ದಾರೆ.
ಪೊಲೀಸ್ ಉಪ ವಿಭಾಗಾಧಿಕಾರಿ ನವೀನ್ ದುಬೆ ಈ ಬಗ್ಗೆ “ಪ್ರಾಥಮಿಕ ಮಾಹಿತಿ ಪ್ರಕಾರ ಯುವಕ ಧೇರಾ ಗ್ರಾಮದವನು ಎಂದು ತಿಳಿದು ಬಂದಿದೆ. ಯುವತಿ ಮದುವೆಯಾಗುವಂತೆ ಕೇಳಿದ್ದಕ್ಕೆ ಯುವಕ ಸಿಟ್ಟಾಗಿ ಆಕೆ ಥಳಿಸಿದ್ದಾನೆ. ಯುವಕನ ಕುರಿತು ಯುವತಿ ದೂರು ನೀಡಲು ನಿರಾಕರಿಸಿದ ಕಾರಣ ಯುವಕನನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಈ ಘಟನೆಯನ್ನು ಚಿತ್ರೀಕರಿಸಿ ಮೊಬೈಲ್ ಗೆ ಹರಿಬಿಟ್ಟವರ ವಿರುದ್ಧ ದೂರು ಯುವತಿ ದಾಖಲಿಸಿದ್ದಾಳೆ.