Advertisement

ಮಹಾರಾಷ್ಟ್ರ ಬಿಜೆಪಿ ಶಾಸಕ ಶೇಲಾರ್ ಗೆ ಕೊಲೆ ಬೆದರಿಕೆ: ಆರೋಪಿ ಬಂಧನ

08:21 PM Jan 08, 2022 | Team Udayavani |

ಮುಂಬೈ: ಬಿಜೆಪಿ ಶಾಸಕ ಆಶಿಶ್ ಶೇಲಾರ್ ಅವರಿಗೆ ಬೆದರಿಕೆ ಮತ್ತು ನಿಂದನೆ ಮಾಡಿದ ಆರೋಪದಲ್ಲಿ ಮೇಲೆ 48 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಶನಿವಾರ ತಿಳಿಸಿದ್ದಾರೆ.

Advertisement

ಶೆಲಾರ್ ಪೊಲೀಸರನ್ನು ಸಂಪರ್ಕಿಸಿದ ನಂತರ ಕ್ರೈಂ ಬ್ರಾಂಚ್‌ನ ಯುನಿಟ್ ತನಿಖೆ ನಡೆಸಿ ಮಾಹಿಮ್‌ನ ನಿವಾಸಿ ಒಸಾಮಾ ಶಂಶಾದ್ ಖಾನ್ ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯು ಬಾಂದ್ರಾದಲ್ಲಿ ಜಮೀನು ವಿವಾದದಿಂದ ಹತಾಶೆಗೊಂಡಿದ್ದು, ಈ ಕಾರಣದಿಂದಾಗಿ ಆತನ ಮಗ ಕೊಲೆ ಯತ್ನ ಪ್ರಕರಣವನ್ನು ಎದುರಿಸಿ ಎರಡು ತಿಂಗಳಿನಿಂದ ಜೈಲಿನಲ್ಲಿದ್ದ.

ಆರೋಪಿ ಬಾಂದ್ರಾ ಪಶ್ಚಿಮದ ಶಾಸಕ ಶೇಲಾರ್ ಅವರ ಮೊಬೈಲ್‌ಗೆ ಕರೆ ಮಾಡಿ ನಿಮ್ಮನ್ನು ಮತ್ತು ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಮತ್ತು ನಿಂದನೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next