Advertisement

ಕೊಹ್ಲಿ ಪುತ್ರಿಗೆ ಬೆದರಿಕೆ ಹಾಕಿದವನ ಬಂಧನ

10:16 PM Nov 10, 2021 | Team Udayavani |

ಮುಂಬೈ: ಭಾರತದ ಕ್ರಿಕೆಟ್‌ ತಂಡದ ಆಟಗಾರ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Advertisement

ಹೈದರಾಬಾದ್‌ ಮೂಲದ ರಾಮ್‌ನಾಗೇಶ್‌ ಶ್ರೀನಿವಾಸ್‌ ಅಕುಬಥಿನಿ(23) ಬಂಧಿತ ಆರೋಪಿ. ಆರೋಪಿಯು ಫ‌ುಡ್‌ ಡೆಲಿವರಿ ಕಂಪನಿಯೊಂದರಲ್ಲಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದದ್ದಾಗಿ ಹೇಳಲಾಗಿದೆ.

ಟಿ20 ವರ್ಲ್ಡ್ ಕಪ್‌ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋತಿದ್ದ ಹಿನ್ನೆಲೆಯಲ್ಲಿ ರಾಮ್‌ನಾಗೇಶ್‌, ಕೊಹ್ಲಿ ಮಗಳನ್ನು ಅತ್ಯಾಚಾರ ಮಾಡುವುದಾಗಿ ಟ್ವಿಟ್ಟರ್‌ ಮೂಲಕ ಬೆದರಿಸಿದ್ದ.

ಇದನ್ನೂ ಓದಿ:ಎಲಾನ್‌ ಮಸ್ಕ್ ಗೆ 3.5 ಲಕ್ಷ ಕೋಟಿ ರೂ. ನಷ್ಟ!

Advertisement

Udayavani is now on Telegram. Click here to join our channel and stay updated with the latest news.

Next