Advertisement

ಐದರ ಬಾಲಕನ ಮೇಲೆ ಬಲವಂತದ ಅನೈಸರ್ಗಿಕ ಸೆಕ್ಸ್‌ : ಯುವಕ ಸೆರೆ

04:10 PM Aug 27, 2018 | udayavani editorial |

ಥಾಣೆ : ಮಹಾರಾಷ್ಟ್ರದ ಪಾಲ್‌ಘರ್‌ ಜಿಲ್ಲೆಯಲ್ಲಿ ಐದು ವರ್ಷದ ಬಾಲಕನ ಮೇಲೆ ಬಲವಂತದ ಅನೈಸರ್ಗಿಕ ಸೆಕ್ಸ್‌ ನಡೆಸಿದ ಆರೋಪದ ಮೇಲೆ 20 ವರ್ಷ ಪ್ರಾಯದ ತರುಣನನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಆರೋಪಿ ತರುಣನು ಬಾಲಕನನ್ನು ಆತನ ಮನೆಯಿಂದ ನಿನ್ನೆ ಭಾನುವಾರ ಮಧ್ಯಾಹ್ನ  ನಾಲ್ಕು ಗಂಟೆಯ ವೇಳೆಗೆ ಕರೆದೊಯ್ದು ವಕನಪಾಡಾದ ಕಾಜಿ ಚಾಳ್‌ ನ ನಿರ್ಜನ ಪ್ರದೇಶದಲ್ಲಿ ಆತನ ಮೇಲೆ ಬಲವಂತದ ಅನೈಸರ್ಗಿಕ ಸೆಕ್ಸ್‌ ನಡೆಸಿದ ಎಂದು ವಾಲೀವ್‌ ಪೊಲೀಸ್‌ ಠಾಣೆಯ ಸಹಾಯಕ ಎಸ್‌ಐ ಎಸ್‌ಎಸ್‌ ಚೌಧರಿ ಹೇಳಿದರು. 

ತನ್ನ ಮೇಲಾದ ಲೈಂಗಿಕ ದೌರ್ಜನ್ಯವನ್ನು ಬಾಲಕನು ತನ್ನ ಹೆತ್ತವರಲ್ಲಿ  ಹೇಳಿದಾಗ ಅವರು ಒಡನೆಯೇ ಪೊಲೀಸರಿಗೆ ದೂರು ನೀಡಿದರು. ಆ ಪ್ರಕಾರ ಪೊಲೀಸರು ನಿನ್ನೆ ಸಂಜೆ ಆರೋಪಿಯನ್ನು ಬಂಧಿಸಿದರು ಎಂದು ಚೌಧರಿ ತಿಳಿಸಿದರು. 

ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಮತ್ತು ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next