Advertisement

Indigo Flight: ಇಂಡಿಗೋ ವಿಮಾನದಲ್ಲಿ ಬೀಡಿ ಸೇದಿದ ವ್ಯಕ್ತಿಯ ಬಂಧನ

10:34 PM Mar 05, 2024 | Team Udayavani |

ಮುಂಬೈ: ದೆಹಲಿಯಿಂದ ಮುಂಬೈಗೆ ಮಂಗಳವಾರ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ವ್ಯಕ್ತಿಯೊಬ್ಬ ಬೀಡಿ ಸೇದಿದ ಘಟನೆ ವರದಿಯಾಗಿದೆ.

Advertisement

ವಿಮಾನ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗುತ್ತಿದ್ದಂತೆ ಆರೋಪಿ ಮೊಹಮ್ಮದ್‌ ಅಮೃದ್ದೀನ್‌(42)ನನ್ನು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಬರುತ್ತಿದ್ದ ಅಕಾಶ ಏರ್‌ಲೈನ್ಸ್‌ ವಿಮಾನದಲ್ಲಿ ಮಾರ್ಗಮಧ್ಯೆ ಬೀಡಿ ಸೇದಿದ್ದ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next