Advertisement

ಬಾಂಬ್ ಸ್ಫೋಟ ನಡೆಯಲಿದೆ…ಟಿವಿ ಚಾನೆಲ್ ಗೆ ಇ-ಮೇಲ್ ಕಳುಹಿಸಿದ್ದ ವ್ಯಕ್ತಿಯ ಬಂಧನ

04:49 PM Nov 06, 2021 | Team Udayavani |

ಅಹಮ್ಮದಾಬಾದ್: ಗುಜರಾತ್ ನ ಅಹಮ್ಮದಾಬಾದ್ ನ ಗುರುದ್ವಾರದಲ್ಲಿ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಮುಂಬಯಿ ಮೂಲದ ಟಿವಿ ಚಾನೆಲ್ ಗೆ ಇ-ಮೇಲ್ ಕಳುಹಿಸಿದ್ದ ಆರೋಪದಡಿ 32 ವರ್ಷದ ಗುಜರಾತ್ ನ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಮುಂಬಯಿ ಕ್ರೈಂ ಬ್ರ್ಯಾಂಚ್ ಪೊಲೀಸರು ತಿಳಿಸಿದ್ದಾರೆ. ಇದೊಂದು ಸುಳ್ಳು ಬೆದರಿಕೆಯ ಇ-ಮೇಲ್ ಆಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಟೆಲಿವಿಷನ್ ಧಾರವಾಹಿ ಸರಣಿಗೆ ಸಂಬಂಧಿಸಿದಂತೆ ಸಮರ್ಪಕವಾದ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಬಾಂಬ್ ಬೆದರಿಕೆಯ ಇ-ಮೇಲ್ ರವಾನಿಸಿರುವುದಾಗಿ ಆರೋಪಿ ನೀಲೇಶ್ ಪರ್ಮಾರ್ ತನಿಖೆಯ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಡೆಪ್ಯುಟಿ ಪೊಲೀಸ್ ಕಮಿಷನರ್ (ಡಿಸಿಪಿ) ಚೈತನ್ಯ ಮಾಂಡ್ಲಿಕ್ ಮಾಹಿತಿ ನೀಡಿದ್ದಾರೆ.

ನವೆಂಬರ್ 2ರಂದು ಅಹಮ್ಮದಾಬಾದ್ ಗುರುದ್ವಾರದಲ್ಲಿ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಇಮೇಲ್ ಕಳುಹಿಸಿರುವುದಾಗಿ ಟಿವಿ ಚಾನೆಲ್ ನ ಕಾನೂನು ಅಧಿಕಾರಿ ಮುಂಬಯಿನ ಬಂಗೂರ್ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಬಾಂಬ್ ಸ್ಫೋಟ ನಡೆಸಲು ರಫೇಲ್ ಯುದ್ಧ ವಿಮಾನ ಬಳಸಲಾಗುವುದು ಮತ್ತು ಈ ಕೆಲಸಕ್ಕಾಗಿ ಈಗಾಗಲೇ ಅಹಮ್ಮದಾಬಾದ್ ನಿಂದ ಹಣವನ್ನು ಪಾವತಿಸಲಾಗಿದೆ ಎಂದು ಬೆದರಿಕೆಯ ಇ ಮೇಲ್ ನಲ್ಲಿ ತಿಳಿಸಿದ್ದ ಎಂದು  ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next