Advertisement
ಆರೋಪಿಯು ಈ ಹಿಂದೆ ಖಾಸಗಿ ವಿಮಾನಯಾನ ಸಂಸ್ಥೆಯ ಕಚೇರಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಈತ ಶೋಕಿ ಜೀವನಕ್ಕಾಗಿ ಹಣ ಮಾಡುವ ಉದ್ದೇಶದಿಂದ ವಿವಿಧ ಏವಿಯೇಷನ್ ಕೋರ್ಸ್ ಮುಗಿಸಿ ಕೆಲಸ ಹುಡುಕುತ್ತಿದ್ದ ಯುವಜನ ರನ್ನೇ ಬಲೆಗೆ ಹಾಕಿಕೊಂಡಿದ್ದ. ಆತನು ಪ್ರತಿಯೊಬ್ಬ ರಿಂದಲೂ 28 ಸಾ.ರೂ.ಹಣ ಪಡೆ ದಿದ್ದು, ಜು.7ರಂದು ಕೇರಳದಲ್ಲಿ ಸಂದರ್ಶನವಿದೆ ಎಂದು ನಂಬಿಸಿದ್ದ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದ. ಮೋಸ ಹೋದ ಹೊಸಬೆಟ್ಟಿನನ ಲಿಕಿಂಗ್ ಎಂಬವರು ನೀಡಿದ ದೂರಿನ ಮೇರೆಗೆ ಸುರತ್ಕಲ್ ಪೊಲೀಸರು ಆರೋಪಿಯನ್ನು ಕದ್ರಿ ಪಾರ್ಕ್ ಬಳಿಯಿಂದ ವಶಕ್ಕೆ ಪಡೆದರು. ಆತನಿಗೆ ನ್ಯಾಯಾಂಗ ಬಂಧನವಿಸಲಾಗಿದೆ. Advertisement
ಸುರತ್ಕಲ್: ಕೆಲಸ ಕೊಡಿಸುವುದಾಗಿ 30ಕ್ಕೂ ಹೆಚ್ಚು ಮಂದಿಗೆ ವಂಚನೆ
11:19 AM Jul 19, 2019 | Team Udayavani |