ಬೆಂಗಳೂರು: ನಗರದ ಸಿಸಿಬಿ ಪೊಲೀಸರು ಮತ್ತು ಮಿಲಿಟರಿ ಗುಪ್ತಚರ ವಿಭಾಗದ ಅಧಿಕಾರಿಗಳ ಜಂಟಿ ಕಾರ್ಯಾಚಾರಣೆಯಲ್ಲಿ ವಿದೇಶಿ ಏಜೆನ್ಸಿಗಳಿಗೆ ಭಾರತದ ರಕ್ಷಣಾ ಮಾಹಿತಿ ನೀಡುತ್ತಿದ್ದ ಯುವಕನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಈತ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಎನ್ನಲಾಗಿದೆ.
ಆರೋಪಿಯು ರಾಜಸ್ಥಾನದ ಬೆರ್ಮರ್ ಮೂಲದವನು. ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ. ಸೇನೆಯ ಕಮಾಂಡೋ ಸಮವಸ್ತ್ರ ಧರಿಸಿ ಬಾರ್ಮರ್ ನ ಮಿಲಿಟರಿ ಸ್ಟೇಶನ್ ಮಾಹಿತಿ, ಸೇನಾ ವಾಹನಗಳ ಓಡಾಟದ ಮಾಹಿತಿಯನ್ನು ಒದಗಿಸುತ್ತಿದ್ದ ಎಂದು ವರದಿಯಾಗಿದೆ.
ಇದನ್ನೂ ಓದಿ:ಜಗನ್ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ
ಸೇನೆಗೆ ಸಂಬಂಧಿಸಿದಂತೆ ಹಲವು ಕಟ್ಟಡಗಳ ಫೋಟೊಗಳನ್ನು, ಬಾರ್ಮೆರ್ ನ ಗಡಿ ಭಾಗದ ಫೋಟೊಗಳನ್ನು ಸೇರಿದಂತೆ ಹಲವಾರು ಸೂಕ್ಷ್ಮ ಮಾಹಿತಿಗಳನ್ನು ಆತ ವಿದೇಶಿ ಏಜೆನ್ಸಿಗಳಿಗೆ ರವಾನೆ ಮಾಡುತ್ತಿದ್ದ.
ಅಧಿಕೃತ ರಹಸ್ಯ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ