Advertisement

VIDEO: ಕಾರಿನಲ್ಲಿ ಅಫ್ಘಾನ್ ಧ್ವಜ ಪ್ರದರ್ಶಿಸಿದ ವ್ಯಕ್ತಿಯನ್ನು ಬಂಧಿಸಿದ ತಾಲಿಬಾನ್ ಉಗ್ರರು

11:31 AM Aug 20, 2021 | Team Udayavani |

ಕಾಬೂಲ್: ತಾಲಿಬಾನ್ ತೆಕ್ಕೆಗೆ ಬಂದ ಬಳಿಕ ಅಫ್ಘಾನಿಸ್ಥಾನಿಗಳ ಬದುಕು ನರಕವಾಗಿದೆ. ಎರಡು ದಶಕಗಳಿಂದ ಸ್ವತಂತ್ರವಾಗಿ ಬದುಕಿದ್ದ ಜನರೀಗ ತಾಲಿಬಾನಿಗಳ ಕೈಗೆ ಸಿಲುಕಿ ಒದ್ದಾಡುತ್ತಿದ್ದಾರೆ. ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಕಾರಿನಲ್ಲಿ ಅಫ್ಘಾನ್ ಧ್ವಜ ಪ್ರದರ್ಶಿಸಿದ್ದ ವ್ಯಕ್ತಿಯನ್ನು ಉಗ್ರರು ಬಂಧಿಸಿ ಎಳೆದೊಯ್ದ ವಿಡಿಯೋ ಇದೀಗ ವೈರಲ್ ಆಗಿದೆ.

Advertisement

ಸ್ಥಳೀಯ ಮಾಧ್ಯಮವೊಂದು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದೆ. ವ್ಯಕ್ತಿಯೊಬ್ಬ ತನ್ನ ಕಾರಿನಲ್ಲಿ ಅಫ್ಘಾನ್ ಧ್ವಜವನ್ನು ಇರಿಸಿದ್ದ. ಇದನ್ನು ಕಂಡ ಉಗ್ರರ ಗುಂಪು ಕಾರನ್ನು ತಡೆದು, ವ್ಯಕ್ತಿಯನ್ನು ಹೊರಕ್ಕೆಳೆದಿದ್ದಾರೆ, ಧ್ವಜವನ್ನು ತೆಗೆದು ಮುದ್ದೆ ಮಾಡಿದ್ದಾರೆ. ವ್ಯಕ್ತಿಯ ಕೈಯನ್ನು ಕಟ್ಟಿ ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಇದನ್ನೂ ಓದಿ:ಅಫ್ಘಾನ್: ಮಹಿಳೆಯರ ಚಿತ್ರವಿರುವ ಪೋಸ್ಟರ್‌ಗೆ ಮಸಿ ಬಳೆದ ತಾಲಿಬಾನ್!

ಅದೇ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡ ಇನ್ನೊಂದು ವಿಡಿಯೋದಲ್ಲಿ ತಾಲಿಬಾನ್ ಉಗ್ರರು, ರಾಷ್ಟ್ರಧ್ವಜವನ್ನು ಹಿಡಿದುಕೊಂಡಿದ್ದ ಅಫ್ಘಾನ್ ವ್ಯಕ್ತಿಯನ್ನು ಥಳಿಸಿದ್ದಾರೆ.

Advertisement

ತಾಲಿಬಾನ್ ನಿಯಮಗಳನ್ನು ಧಿಕ್ಕರಿಸಿ ಅಫ್ಘಾನಿಸ್ಥಾನದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಗುರುವಾರ ಅಫ್ಘಾನ್ ನ ಸ್ವತಂತ್ರ್ಯ ದಿನವಾಗಿದ್ದು, ಹಲವಾರು ಮಂದಿ ರಾಷ್ಟ್ರಧ್ವಜದೊಂದಿಗೆ ಪ್ರತಿಭಟನೆ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next