Advertisement

Khalistan ಪರ ಕುಕೃತ್ಯ; ಲಂಡನ್‌ನಲ್ಲಿ ಬ್ರಿಟಿಷ್-ಸಿಖ್ ವ್ಯಕ್ತಿಯ ಬಂಧಿಸಿ ವಿಚಾರಣೆ

05:00 PM Oct 05, 2023 | Team Udayavani |

ಲಂಡನ್: ಮಾರ್ಚ್‌ನಲ್ಲಿ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಸ್ಕಾಟ್‌ಲ್ಯಾಂಡ್ ಯಾರ್ಡ್ “ಹಿಂಸಾತ್ಮಕ ಅಸ್ವಸ್ಥತೆ” ಎಂಬ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದೆ.

Advertisement

ಸೋಮವಾರ ಇಂಡಿಯಾ ಹೌಸ್‌ನ ಹೊರಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿವಶಕ್ಕೆ ಪಡೆಯಲಾದ ವ್ಯಕ್ತಿಯನ್ನು ಮಾರ್ಚ್ 19 ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಖಲೀಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹೇಳಿಕೆಗಳ ಮೇಲೆ ಯುಕೆ ಸರಕಾರದ ಮಧ್ಯಸ್ಥಿಕೆಗೆ ಒತ್ತಾಯಿಸಿ ಸೋಮವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬ್ರಿಟಿಷ್ ಸಿಖ್ ವ್ಯಕ್ತಿಯನ್ನು ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳು ನೋಡಿ ಬಂಧಿಸಿದ್ದಾರೆ.

ಆರೋಪಿಯ ಮೇಲೆ ಆರೋಪ ಹೊರಿಸಿದ ನಂತರವೇ ಆತನ ವಿವರ ಬಹಿರಂಗ ಪಡಿಸಬಹುದು, ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುತಿಸಿರುವ ಹತ್ತಕ್ಕೂ ಹೆಚ್ಚು ಆರೋಪಿಗಳಲ್ಲಿ ಒಬ್ಬ ಎಂದು ನಂಬಲಾಗಿದ್ದು,ಈತ ಮಾರ್ಚ್ 19 ರಂದು ಭಾರತದ ಹೈಕಮಿಷನ್ ಮೇಲಿನ ದಾಳಿಗೆ ಜವಾಬ್ದಾರನಾಗಿದ್ದಾನೆ ಎನ್ನಲಾಗಿದೆ. ಖಾಲಿಸ್ತಾನ್ ಉಗ್ರರು ಕಟ್ಟಡವನ್ನು ಮೇಲಕ್ಕೆ ಹತ್ತಿ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಲು ಯತ್ನಿಸಿದ್ದರು. ಕಟ್ಟಡದ ಮೇಲೆ ವಸ್ತುಗಳು ಎಸೆದಿದ್ದರಿಂದ ಒಬ್ಬ ಅಧಿಕಾರಿ ಗಾಯಗೊಂಡಿದ್ದರು ಮತ್ತು ಕಿಟಕಿ ಗಾಜುಗಳು ಒಡೆದಿದ್ದದವು.

Advertisement

Udayavani is now on Telegram. Click here to join our channel and stay updated with the latest news.

Next