Advertisement

Arrested: ಮಹಿಳೆಗೆ ಮರ್ಮಾಂಗ ತೋರಿಸಿದ ಆರೋಪಿ ಬಂಧನ

10:47 AM Jul 09, 2024 | Team Udayavani |

ಬೆಂಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಯೊಬ್ಬರಿಗೆ ಮಾರ್ಮಾಂಗ ತೋರಿಸಿ ಅಸಭ್ಯ ವರ್ತನೆ ತೋರಿದ ಆರೋಪಿಯನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಾಸಿಪಾಳ್ಯ ನಿವಾಸಿ ಅಯೂಬ್‌ (48) ಬಂಧಿತ. ಆರೋಪಿ ಕಲಾಸಿಪಾಳ್ಯದಲ್ಲಿ ಟೀ ಅಂಗಡಿಯಲ್ಲಿ ಕೆಲಸ ಮಾಡು

Advertisement

ತ್ತಿದ್ದು, ಸಮೀಪದ ರೂಮ್‌ವೊಂದರಲ್ಲಿ ವಾಸವಾಗಿದ್ದ. ಜೂನ್‌ 27ರಂದು ಮಧ್ಯಾಹ್ನ ವಿ.ವಿ.ಪುರದ ಸಮೀಪದ ವಾಸವಿ ಟೆಂಪಲ್‌ ರಸ್ತೆ ಜೈನ್‌ ಕಾಲೇಜು ಮುಂಭಾಗ ರಸ್ತೆಯಲ್ಲಿ ಬಸ್‌ಗಾಗಿ ಮಹಿಳೆ ಹಾಗೂ ಕೆಲ ವಿದ್ಯಾರ್ಥಿನಿಯರು ಕಾಯುತ್ತಿದ್ದರು. ಅದೇ ವೇಳೆ ಪರಿಚಯಸ್ಥರ ಬೈಕ್‌ನಲ್ಲಿ ಬಂದ ಆರೋಪಿ, ತನ್ನ ಮರ್ಮಾಂಗವನ್ನು ಮಹಿಳೆಗೆ ತೋರಿಸಿ ಅಸಭ್ಯ ವರ್ತನೆ ತೋರಿದ್ದಾನೆ. ಈ ಸಂಬಂಧ ಮಹಿಳೆ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next