Advertisement

Deepfake video: ರಶ್ಮಿಕಾ ಮಂದಣ್ಣ ಡೀಪ್‌ ಫೇಕ್‌ ಪ್ರಕರಣ; ಪ್ರಮುಖ ಆರೋಪಿ ಬಂಧನ

04:50 PM Jan 20, 2024 | Team Udayavani |

ಆಂಧ್ರ ಪ್ರದೇಶ: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಶನಿವಾರ(ಜ.20 ರಂದು) ಪೊಲೀಸರು ಬಂಧಿಸಿದ್ದಾರೆ.

Advertisement

ದೆಹಲಿ ಪೊಲೀಸರು ಆಂಧ್ರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿರುವುದು ವರದಿಯಾಗಿದೆ. ಆರೋಪಿಯನ್ನು ಆಂಧ್ರಪ್ರದೇಶದ ಗುಂಟೂರಿನ 24 ವರ್ಷದ ಈಮನಿ ನವೀನ್ ಎಂದು ಗುರುತಿಸಲಾಗಿದೆ.

ಕಳೆದ ನವೆಂಬರ್‌ ನಲ್ಲಿ ನಟಿ ರಶ್ಮಿಕಾ ಅವರ ಮುಖವನ್ನು ಬಳಸಿಕೊಂಡು ಇಂಡೋ – ಬ್ರಿಟಿಷ್‌ ಸೋಶಿಯಲ್‌ ಮೀಡಿಯಾ ತಾರೆ ಝಾರಾ ಪಟೇಲ್‌ ವಿಡಿಯೋಗೆ ಬಳಸಿ ಆಶ್ಲೀಲವಾಗಿ ಎಡಿಟ್‌ ವಿಡಿಯೋವನ್ನು ವೈರಲ್‌ ಮಾಡಲಾಗಿತ್ತು.

ಈ ವಿಡಿಯೋ ಬಳಿಕ ರಶ್ಮಿಕಾ ಪರವಾಗಿ ಅನೇಕ ಕಲಾವಿದರು ಧ್ವನಿ ಎತ್ತಿದ್ದರು. ರಶ್ಮಿಕಾ ಈ ಘಟನೆಯಿಂದ ನೊಂದುಕೊಂಡಿದ್ದರು. ಇದಾದ ಬಳಿಕ ಡೀಪ್‌ ಫೇಕ್‌ ಪ್ರಕರಣ ಹೆಚ್ಚಾಗಿತ್ತು. ಕತ್ರಿನಾ ಕೈಫ್‌ ಅವರ ವಿಡಿಯೋ ಕೂಡ ವೈರಲ್‌ ಆಗಿತ್ತು.

ಇದನ್ನೂ ಓದಿ: Sania-Shoaib .. ಪ್ರೇಮ್‌ ಕಹಾನಿಯಿಂದ ಸದ್ದು ಮಾಡಿದ ಇಂಡೋ – ಪಾಕ್‌ ಸೆಲೆಬ್ರಿಟಿಗಳಿವರು

Advertisement

ಕೇಂದ್ರ ಸರ್ಕಾರ ಡೀಪ್‌ ಫೇಕ್‌ ಸಂಬಂಧಿಸಿದಂತೆ ಕಾನೂನು ರಚಿಸುವ ಕುರಿತು ಹೇಳಿತ್ತು. ಘಟನೆಯ ನಂತರ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 465 (ನಕಲಿ) ಮತ್ತು 469 (ಪ್ರತಿಷ್ಠೆಗೆ ಹಾನಿ) ಮತ್ತು ಮಾಹಿತಿ ತಂತ್ರಜ್ಞಾನದ 66 ಸಿ (ಗುರುತಿನ ಕಳ್ಳತನ) ಮತ್ತು 66 ಇ (ಗೌಪ್ಯತೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ಇದೀಗ ದೆಹಲಿ ಪೊಲೀಸರು ಆಂಧ್ರ ಪ್ರದೇಶದಲ್ಲಿ ಡೀಪ್‌ ಫೇಕ್‌ ವಿಡಿಯೋ ವೈರಲ್‌ ಮಾಡಿದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸಚಿನ್ ತೆಂಡೂಲ್ಕರ್ ಹಾಗೂ ಅವರ ಮಗಳು ಸಾರಾ ಅವರ ಮುಖವನ್ನು ಬಳಸಿಕೊಂಡು ಡೀಪ್‌ ಫೇಕ್‌ ಮಾಡಲಾಗಿದೆ. ಈ ಸಂಬಂಧ ಮುಂಬಯಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next