Advertisement

ಸ್ನೇಹಿತನ ಪಿಸ್ತೂಲಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು: ಓರ್ವ ಜಖಂ

12:11 PM Dec 19, 2018 | Team Udayavani |

ಥಾಣೆ , ಮಹಾರಾಷ್ಟ್ರ : ಸ್ನೇಹಿತನ ಕೈಯಲ್ಲಿದ್ದ ನಾಡ ಪಿಸ್ತೂಲಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ 20ರ ಹರೆಯದ ತರುಣ ಗಾಯಗೊಂಡ ಘಟನೆ ನಡೆದಿದೆ. 

Advertisement

ವಾಗ್ಲೆ ಎಸ್ಟೇಟ್‌ ಪ್ರದೇಶದ ಕಿಸಾನ್‌ ನಗರದಲ್ಲಿ ಸ್ನೇಹಿತರ ಒಂದು ಗುಂಪು ರಸ್ತೆ ಬದಿ ಹರಟೆ ಹೊಡೆಯುತ್ತಿದ್ದಾಗ ಅವರಲ್ಲೊಬ್ಬ ತನ್ನ ಬಳಿ ಇದ್ದ ಪಿಸ್ತೂಲನ್ನು ಹೊರ ತೆಗೆದು ತೋರಿಸುವಾಗ ಅದರಿಂದ ಆಕಸ್ಮಿಕವಾಗಿ ಗುಂಡು ಹಾರಿತು. ಆ ಗುಂಡು ವಿಜಯ್‌ ಯಾದವ್‌ ಎಂಬಾತನ ಹೊಟ್ಟೆಯನ್ನು ಹೊಕ್ಕಿತು. 

ತೀವ್ರವಾಗಿ ಗಾಯಗೊಂಡ ವಿಜಯ್‌ ಯಾದವ್‌ನನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹಿರಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್‌ ಎಂ ಪಾಟೀಲ್‌ ತಿಳಿಸಿದ್ದಾರೆ. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next