Advertisement
40 ವರ್ಷಗಳ ಹಿಂದೆ ಅರಕಲಗೂಡು ತಾಲೂಕಿನ ಬಸವಪಟ್ಟಣದಿಂದ ಹಾಸನಕ್ಕೆ ಬಂದ ವೆಂಕಟೇಶ್ ಶೆಟ್ಟಿ, ಈ ಹೋಟೆಲ್‌ನ ಸಂಸ್ಥಾಪಕರು. ಮೊದಲಿಗೆ ಸೋಡಾ ಮಾರಾಟ ಮಾಡುತ್ತಿದ್ದ ಇವರು, 25 ವರ್ಷಗಳ ಹಿಂದೆ ಚಿಕ್ಕದಾಗಿ ಹೋಟೆಲ್ ಆರಂಭಿಸಿದರು. ಪತ್ನಿ ಜೊತೆ ಸೇರಿ ಇಡ್ಲಿ, ದೋಸೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಡ್ಲಿ ಜೊತೆ ಕೊಡುತ್ತಿದ್ದ ತುಪ್ಪ ಜನರನ್ನು ಆಕರ್ಷಿಸಿತು. ಇವರ ಬಳಿಯೇ ಒಂದು ತಿಂಗಳು ಕೆಲಸಕ್ಕೆ ಇದ್ದ ಹಾಸನದ ದೊಡ್ಡಬಸವನಹಳ್ಳಿ ರಮೇಶ್, ಹೋಟೆಲ್ ಮಳಿಗೆಯನ್ನು ಬಾಡಿಗೆಗೆ ಪಡೆದು ಹೋಟೆಲನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ನಾಲ್ಕನೇ ತರಗತಿ ಓದಿರುವ ರಮೇಶ್, ಮೊದಲು ಗಾರೆಕೆಲಸ ಮಾಡುತ್ತಿದ್ದರು. ನಂತರ ವೆಂಕಟೇಶ್‌ಶೆಟ್ಟಿ ಅವರ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ವೆಂಕಟೇಶ್ ಶೆಟ್ರಿಗೆ ವಯಸ್ಸಾಗಿದ್ದ ಕಾರಣ ಹೋಟೆಲ್ ನಡೆಸಲು ಆಗಲಿಲ್ಲ. ಅಂಥ ಸಮಯದಲ್ಲೇ ಹೋಟೆಲನ್ನು ಬಾಡಿಗೆಗೆ ಪಡೆದ ರಮೇಶ್, ಇದೀಗ 8 ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಹಾಸನಾಂಬ ದೇಗುಲ, ಚೆನ್ನಕೇಶವ ಕಲ್ಯಾಣ ಮಂಟಪದ ಬಳಿ ಇದೇ ಹೆಸರಲ್ಲಿ ಮತ್ತೂಂದು ಸಸ್ಯಾಹಾರಿ ಹೋಟೆಲ್ ಮಾಡಿ ಅಲ್ಲಿ ಇಡ್ಲಿ, ವಡೆ ದೋಸೆ ಜೊತೆಗೆ ಮುದ್ದೆ, ಚಪಾತಿ, ಪೂರಿ ಊಟ ಕೂಡ ಸಿಗುತ್ತಿದೆ, ರಿಂಗ್ ರೋಡ್‌ನಲ್ಲಿ ಮಾಂಸಾಹಾರಿ ಹೋಟೆಲ್ ಮಾಡಿದ್ದಾರೆ.
Related Articles
ವೆಂಕಟೇಶ್‌ಶೆಟ್ರಾ 25 ವರ್ಷಗಳಿಂದಲೂ ಹೋಟೆಲ್ ನಡೆಸುತ್ತಿದ್ದರೂ ನಾಮಫಲಕ ಹಾಕಿರಲಿಲ್ಲ. ಅವರಿಗೆ ವಯಸ್ಸಾಗಿದ್ದ ಕಾರಣ ಜನ ಪ್ರೀತಿಯಿಂದ ಮಾಮು ಅಂತ ಕರೆಯುತ್ತಿದ್ದರು. ಅದೇ ಜನರ ಮನಸ್ಸಲ್ಲಿ ಉಳಿಯಿತು. ಈಗ ಮಾಮು ಇಡ್ಲಿ ಹೋಟೆಲ್ ಎಂದೇ ಗುರುತಿಸಲಾಗುತ್ತಿದೆ.
Advertisement
ಹೋಟೆಲ್ ವಿಳಾಸ: ಹಾಸನ ನಗರದ ಕಸ್ತೂರ ಬಾ ರಸ್ತೆ, ತೆಲುಗರ ಬೀದಿಗೆ ಹೋಗಿ “ಮಾಮು ಹೋಟೆಲ್’ ಕೇಳಿದ್ರೆ ತೋರಿಸುತ್ತಾರೆ. ಹೋಟೆಲ್ ಸಮಯ:
ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ವಾರದ ರಜೆ ಇಲ್ಲ. ತಿಂಡಿ ಮಾತ್ರ:
ಹೋಟೆಲ್‌ನಲ್ಲಿ ಸಿಗೋದು ಮೂರೇ ತಿಂಡಿ. ಆದ್ರೂ, ಕಡ್ಲೆ ಚಟ್ನಿ, ತುಪ್ಪ ಜೊತೆ ಇಡ್ಲಿ ತಿನ್ನೊಂದು ಒಂದು ಹೊಸ ಅನುಭವ. (ಇಡ್ಲಿ ನಾಲ್ಕು) ದರ 30 ರೂ. ಇಡ್ಲಿಯನ್ನು ಹೊರತುಪಡಿಸಿದರೆ, ಸೆಟ್ ದೋಸೆ, ಹೈದ್ರಾಬಾದ್ ದೋಸೆ ಸಿಗುತ್ತೆ. ದರ 30 ರೂ.. – ಎನ್.ನಂಜುಂಡೇಗೌಡ/ಭೋಗೇಶ ಆರ್.ಮೇಲುಕುಂಟೆ