ಪಣಂಬೂರು: ಮಾಜಿ ಶಾಸಕ ಮೊದೀನ್ ಬಾವಾ ಅವರ ಸಹೋದರ, ಮಿಸ್ಬಾ ಶಿಕ್ಷಣ ಸಂಸ್ಥೆ ಚೇರ್ಮನ್ ಮಮ್ತಾಜ್ ಅಲಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನೆ ನೀಡಿದ ಮೇರೆಗೆ ಬಂಧಿಸಲ್ಪಟ್ಟಿರುವ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜ. 9ರ ವರೆಗೆ ಮುಂದೂಡಿದೆ. ಇದರಿಂದಾಗಿ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರಿಯಲಿದೆ.
ಆಯೇಷಾ, ಶೋಹೆಬ್, ಸತ್ತಾರ್ ಸಹಿತ ಇತರರು ಹಣಕ್ಕಾಗಿ ಹನಿ ಟ್ರಾÂಪ್ ಮಾಡಿದ್ದರು ಎಂದು ಕುಟುಂಬಸ್ಥರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
60 ದಿನಗಳ ಒಳಗಾಗಿ ಪೊಲೀಸರು ಚಾರ್ಜ್ ಶೀಟ್ ಹಾಕದೇ ಇರುವುದರಿಂದ ಜಾಮೀನು ನೀಡಲು ಅವಕಾಶವಿದ್ದು ಆರೋಪಿ ಪರ ವಕೀಲರು ಈ ಕುರಿತು ವಾದಿಸಿದ್ದರು. ಇದನ್ನು ಪರಿಗಣಿಸಿ ಸ್ಥಳೀಯ ಹಾಗೂ ಹೈಕೋರ್ಟ್ ಜಾಮೀನು ನೀಡಲು ನಿರ್ದೇಶಿಸಿತ್ತು.
ಆದರೆ ಮಮ್ತಾಜ್ ಅಲಿ ಕುಟುಂಬಸ್ಥರ ಪರ ವಾದಿಸಿರುವ ಪಿ.ಪಿ. ಹೆಗ್ಡೆ ಅವರು ಭಾರತೀಯ ನ್ಯಾಯ ಸಂಹಿತೆ ನೂತನ ಕಾಯ್ದೆಯ ಅನ್ವಯ 90 ದಿನಗಳ ಕಾಲಾವಕಾಶ ಇದೆ. ಹೀಗಾಗಿ ಮಾನ್ಯ ಮಾಡಬಾರದು ಎಂದು ವಾದಿಸಿದ್ದು, ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನು ಅರ್ಜಿ ವಾದವನ್ನು ಜ. 9ರ ವರೆಗೆ ಮುಂದೂಡಿ ಭಾರತೀಯ ನ್ಯಾಯ ಸಂಹಿತೆಯ ಹೊಸ ಕಾನೂನಿನಂತೆ ನೀಡಬೇಕೆ ಅಥವಾ ಈ ಹಿಂದಿನ ಕಾನೂನು ಮಾನ್ಯವೆ ಎಂಬ ಬಗ್ಗೆಯೂ ವಿಚಾರಣೆ ನಡೆಸಲಿದೆ.