Advertisement

Review bombing: ವಿಮರ್ಶಕರಿಂದ ಸಿನಿಮಾಗಳು ಸಾಯಲು ಸಾಧ್ಯವಿಲ್ಲ; ನಟ ಮಮ್ಮುಟ್ಟಿ

06:20 PM Nov 20, 2023 | Team Udayavani |

ಕೊಚ್ಚಿ: ಮಾಲಿವುಡ್‌ ನಲ್ಲಿ ಕಳೆದ ಕೆಲ ಸಮಯದಿಂದ ಸಿನಿಮಾಗಳಿಗೆ ನೆಗೆಟಿವ್‌ ರಿವ್ಯೂ ನೀಡುವ ವಿಚಾರದಲ್ಲಿ ದೂರುಗಳು ದಾಖಲಾಗಿವೆ.

Advertisement

ಇತ್ತೀಚೆಗೆ ನಟ ದಿಲೀಪ್‌ ಹಾಗೂ ತಮನ್ನಾ ಅಭಿನಯದ ʼಬಾಂದ್ರಾʼ ಚಿತ್ರತಂಡ ಸಿನಿಮಾದ ಕುರಿತು ನೆಗೆಟಿವ್‌ ರಿವ್ಯೂ ನೀಡಿದ ಕಾರಣಕ್ಕಾಗಿ ಯೂಟ್ಯೂಬರ್ಸ್‌ ಹಾಗೂ ವ್ಲಾಗರ್‌ ಗಳ ವಿರುದ್ಧ ಚಿತ್ರತಂಡವೊಂದು ದೂರು ದಾಖಲಿಸಿತ್ತು. ಇದಕ್ಕೂ ಮೊದಲು ಅಕ್ಟೋಬರ್‌ 13 ರಂದು ರಿಲೀಸ್‌ ಆದ ʼರಾಹೆಲ್‌ ಮಕಲ್‌ʼ ಸಿನಿಮಾದ ನಿರ್ದೇಶಕ ಉಬೈನಿ ಇ ಕೂಡ ನೆಗೆಟಿವ್‌ ರಿವ್ಯೂ ನೀಡಿದ ಫೇಸ್‌ ಬುಕ್‌, ಯೂಟ್ಯೂಬರ್ಸ್‌ ಹಾಗೂ ವ್ಲಾಗರ್ಸ್‌ ಗಳ ವಿರುದ್ಧ ದೂರು ದಾಖಲಿಸಿದ್ದರು.

ಇದರ ಬೆನ್ನಲ್ಲೇ ಈ ಕುರಿತು ಮಾಲಿವುಡ್‌ ಸಿನಿಮಾರಂಗದ ಹಿರಿಯ ನಟ ಮಮ್ಮುಟ್ಟಿ ಅವರು ಮಾತನಾಡಿದ್ದಾರೆ.

ಮಮ್ಮುಟ್ಟಿ ಹಾಗೂ ಜ್ಯೋತಿಕಾ ಪ್ರಧಾನ ಪಾತ್ರದಲ್ಲಿರುವ ʼ ಕಾತಲ್-ದಿ ಕೋರ್ʼ ಸಿನಿಮಾ ಇದೇ ನ.23 ರಂದು ತೆರೆ ಕಾಣಲಿದೆ. ಪ್ರಚಾರದ ಅಂಗವಾಗಿ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿತು. ಇದೇ ವೇಳೆ ಮಮ್ಮುಟ್ಟಿ ಸಿನಿಮಾಗಳ ವಿಮರ್ಶೆ ಬಗ್ಗೆ ಮಾತನಾಡಿದ್ದಾರೆ.

ಕೋಟ್ಯಂತರ ರೂಪಾಯಿಯಲ್ಲಿ ತಯಾರಾದ ಮತ್ತು ಅನೇಕ ಜನರ ಪರಿಶ್ರಮದಿಂದ ಮಾಡಿದ ಸಿನಿಮಾವೊಂದು ವಿಮರ್ಶೆಯಿಂದ ಥಿಯೇಟರ್‌ ನಲ್ಲಿ ಸೋಲುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು “ಒಂದು ವಿಮರ್ಶೆಯಿಂದಾಗಿ ಸಿನಿಮಾದ ಸೋಲು ಆಗುವುದಿಲ್ಲ. ವಿಮರ್ಶೆಯು ವಿಮರ್ಶಕರ ದೃಷ್ಟಿಕೋನವನ್ನು ಆಧರಿಸಿದೆ. ವಿಮರ್ಶೆಗಳನ್ನು ನಿಲ್ಲಿಸುವುದರಿಂದ ಸಿನಿಮಾಕ್ಕೇನು ಹೊಡೆತ ಬೀಳುವುದಿಲ್ಲ ಅಥವಾ ಲಾಭವಾಗುದಿಲ್ಲ. ಯಾವ ಸಿನಿಮಾವನ್ನು ನೋಡಬೇಕೆನ್ನುವ ನಿರ್ಧಾರವನ್ನು ಪ್ರೇಕ್ಷಕರು ಮಾಡುತ್ತಾರೆ. ಇದಲ್ಲದೆ ನಮಗೆ ಅಭಿಪ್ರಾಯವನ್ನು ಹೇಳುವ ಸ್ವಾತಂತ್ಯವಿದೆ” ಎಂದು ಮಮ್ಮುಟ್ಟಿ ಹೇಳಿದ್ದಾರೆ.

Advertisement

ಇದನ್ನೂ ಓದಿ: Kollywood: ಅನಾರೋಗ್ಯ: ಹಿರಿಯ ನಟ ವಿಜಯಕಾಂತ್ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ

“ಸಿನಿಮಾ ನೋಡಿದ ಬಳಿಕ ಅಭಿಪ್ರಾಯಗಳು ನಮ್ಮದೇ ಆಗಿರಬೇಕು ಹೊರತು ಇತರರದ್ದಲ್ಲ. ನಾವು ಇತರರ ಅಭಿಪ್ರಾಯವನ್ನು ಕೇಳಿ ಮುಂದುವರೆದರೆ ಆಗ ನಮ್ಮ ಸ್ವಂತ ಅಭಿಪ್ರಾಯಗಳನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಸಿನಿಮಾ ನೋಡಬೇಕು” ಎಂದರು.

ಜಿಯೋ ಬೇಬಿ ನಿರ್ದೇಶನದ ʼಕಾತಲ್-ದಿ ಕೋರ್ʼ ಸಿನಿಮಾದ ಕಥೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆಯುತ್ತದೆ. ಸಿನಿಮಾದಲ್ಲಿ ಮಮ್ಮುಟ್ಟಿ ಮ್ಯಾಥ್ಯೂ ಎನ್ನುವ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮಮ್ಮುಟ್ಟಿ ಸಲಿಂಗಕಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next