Advertisement
ಆರೋಪವನ್ನು ಬಿಎಸ್ಎಫ್ ನಿರಾಕರಿಸಿದ್ದು, ದೇಶದ ಗಡಿಯನ್ನು ಶ್ರದ್ಧೆಯಿಂದ ಕಾಪಾಡುತ್ತಿದ್ದೇವೆ ಎಂದು ಪ್ರತಿಪಾದಿಸಿದೆ.
Related Articles
Advertisement
ಬಿಎಸ್ಎಫ್ನಿಂದ ಮಹಿಳೆಯರು ಹಿಂಸಿಸಲ್ಪಡುತ್ತಿದ್ದಾರೆ.ಅವರು ಮಹಿಳೆಯರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ, ನೀವು ಏಕೆ ಪ್ರತಿಭಟಿಸಲಿಲ್ಲ” ಎಂದು ಸಭೆಯಲ್ಲಿದ್ದ ಅಧಿಕಾರಿಗಳನ್ನು ಸಿಎಂ ಮಮತಾ ಪ್ರಶ್ನಿಸಿ, ಗಡಿ ಭದ್ರತೆ ರಾಜ್ಯದ ಜವಾಬ್ದಾರಿಯಲ್ಲ ಎಂದು ಒತ್ತಿ ಹೇಳಿದರು.
ಪೂರ್ವ ವಲಯದ ಹಿರಿಯ BSF ಅಧಿಕಾರಿಯೊಬ್ಬರು ಆರೋಪಗಳನ್ನು ತಳ್ಳಿಹಾಕಿದ್ದು, ಸೇನೆ ತನ್ನ ಕರ್ತವ್ಯಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಗಡಿಯಲ್ಲಿ ಬಿಎಸ್ಎಫ್ 24/7 ಕಟ್ಟೆಚ್ಚರ ವಹಿಸಿದೆ. ಗಡಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದೇವೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ.
‘ಒಳನುಸುಳುವಿಕೆ ಸಮಸ್ಯೆಗೆ ಕೇಂದ್ರ ಸರಕಾರವು ಟಿಎಂಸಿಯನ್ನು ಅನ್ಯಾಯವಾಗಿ ದೂಷಿಸುತ್ತಿದೆ’ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, “ಯಾರಾದರೂ ರಾಜ್ಯವನ್ನು ಅಸ್ಥಿರಗೊಳಿಸಲು ಮತ್ತು ತೃಣಮೂಲ ಕಾಂಗ್ರೆಸ್ನ ಮೇಲೆ ದೂಷಿಸಲು ಯೋಚಿಸಿದರೆ, ಗಡಿ ಪ್ರದೇಶಗಳು ಬಿಎಸ್ಎಫ್ನಿಂದ ನಿಯಂತ್ರಿಸಲ್ಪಡುವುದರಿಂದ ಅದು ಟಿಎಂಸಿಯ ತಪ್ಪಲ್ಲ ಎಂದು ನಾನು ಹೇಳುತ್ತೇನೆ. . ಕೆಲವು ಮಾಧ್ಯಮ ಚಾನೆಲ್ಗಳು ಟಿಆರ್ಪಿಗಾಗಿ ಈ ತಪ್ಪು ಮಾಹಿತಿಯನ್ನು ಹರಡುತ್ತಿವೆ” ಎಂದೂ ಹೇಳಿಕೆ ನೀಡಿದ್ದಾರೆ.