Advertisement

ಪಕ್ಷಾಧ್ಯಕ್ಷರ ಸಭೆಗೆ ಮಮತಾ ಬರಲ್ಲ; ಏಕ ಕಾಲದಲ್ಲಿ ಚುನಾವಣೆಗೆ ಶ್ವೇತ ಪತ್ರ ಸಿದ್ಧಪಡಿಸಿ

11:54 AM Jun 19, 2019 | Sathish malya |

ಹೊಸದಿಲ್ಲಿ : ‘ಏಕ ದೇಶ ಏಕ ಚುನಾವಣೆ’ ಯನ್ನು ಅವಸರದಲ್ಲಿ ಜಾರಿಗೆ ತರುವ ಬದಲು ಕೇಂದ್ರ ಸರಕಾರ ಆ ಬಗ್ಗೆ  ಶ್ವೇತ ಪತ್ರ ಹೊರ ತರಬೇಕು ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫ‌ರ್ಮಾನು ಹೊರಡಿಸಿದ್ದಾರೆ.

Advertisement

ಪ್ರಧಾನಿ ಮೋದಿ ಅವರು ನಾಳೆ ಬುಧವಾರ (ಜೂನ್‌ 19) ದಿಲ್ಲಿಯಲ್ಲಿ ಏಕ ದೇಶ ಏಕ ಚುನಾವಣೆ ಸಹಿತ ಇತರ ಹಲವು ವಿಷಯಗಳನ್ನು ಚರ್ಚಿಸಲು ಕರೆದಿರುವ ಸರ್ವ ರಾಜಕೀಯ ಪಕ್ಷಗಳ ಅಧ್ಯಕ್ಷರ ಸಭೆಗೆ ಹಾಜರಾಗಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಮಮತಾ ಹೇಳಿದ್ದಾರೆ.

ಈ ವರ್ಷ ನಡೆಯಲಿರುವ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಮತ್ತು 2022ರಲ್ಲಿ ನಡೆಯಲಿರುವ ದೇಶದ 75ನೇ ಸ್ವಾತಂತ್ರ್ಯ ವರ್ಷಾಚರಣೆ, ಏಕ ದೇಶ-ಏಕ ಚುನಾವಣೆ ಮತ್ತಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು, ರಾಜ್ಯಸಭೆ ಅಥವಾ ಲೋಕಸಭೆಯಲ್ಲಿ ಕನಿಷ್ಠ ಒಬ್ಬ ಸದಸ್ಯನನ್ನಾದರೂ ಹೊಂದಿರುವ ರಾಜಕೀಯ ಪಕ್ಷಗಳ ಅಧ್ಯಕ್ಷರು ಜೂನ್‌ 19ರಂದು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಧಾನಿ ಮೋದಿ ವಿನಂತಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next