ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಾಯಕರುಗಳ ವಾಗ್ಯುದ್ಧ ಮತ್ತೆ ಮುಂದುವರಿದಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೆ ಕೋಪ, ಸಿಟ್ಟು ದಿನನಿತ್ಯ ಹೆಚ್ಚಾಗುತ್ತಿದೆ. ಈಗಾಗಲೇ ತೃಣ ಮೂಲ ಕಾಂಗ್ರೆಸ್ ಹೊರ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಓದಿ : ಬೇಸಿಗೆಯಲ್ಲಿ ಕಾಡುವ ಬಾಯಿ ಹುಣ್ಣಿಗೆ ಇಲ್ಲಿದೆ ನೋಡಿ ಮನೆ ಮದ್ದು
ಬರ್ಧಮನ್ ನಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಾಲ್ಕು ಹಂತದ ಚುನಾವಣೆಯಲ್ಲಿ ಈಗಾಗಲೇ ತೃಣಮೂಲ ಕಾಂಗ್ರೆಸ್ ಹೊರ ಹೋಗಿದೆ. ನೀವು ಫೋರ್, ಸಿಕ್ಸ್ ತುಂಬಾ ಭಾರಿಸಿದ್ದೀರಿ. ಆದರೇ, ಬಿಜೆಪಿ ಈಗಾಗಲೇ ಸೆಂಚೂರಿ ಭಾರಿಸಿದೆಪಶ್ಚಿಮ ಬಂಗಾಳದ ಜನರು ಇನ್ನು ಕೂಡ ಮಮತಾ ಬ್ಯಾನರ್ಜಿಯವರ ದುರಹಂಕಾರವನ್ನು ಸಹಿಸಿಕೊಳ್ಳುವುದಿಲ್ಲ. ಜನರಿಗೆ ಈಗ ತಿಳಿದಿದೆ. ಜನರು ರಾಜ್ಯದಲ್ಲಿ ಅಸಲಿ ಪರಿವರ್ತನೆಯನ್ನು ಕಾಣ ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮಮತಾ ದೀದಿಯವರ ಜನರು ಬಂಗಾಳದ ಎಸ್ ಸಿ ಸಮುದಾಯವನ್ನು ನಿಂದಿಸುತ್ತಾರೆ, ಅವರನ್ನು ಭಿಕ್ಷುಕರು ಎಂದು ಕರೆದಿದ್ದಾರೆ ಎಂದು ಪ್ರಧಾನಿ ಆರೋಪಿಸಿದ್ದಾರೆ.
“ಇಂತಹ ಕಹಿ ಮಾತುಗಳನ್ನು ಕೇಳಿ ಬಾಬಾ ಸಹಾಬ್ ಅವರ ಆತ್ಮಕ್ಕೆ ನೋವುಂಟಾಗುತ್ತದೆ. ದೀದಿ ತನ್ನನ್ನು ‘ರಾಯಲ್ ಬಂಗಾಳ ಹುಲಿ’ ಎಂದು ಕರೆದುಕೊಳ್ಳುತ್ತಾರೆ. ಎಸ್ ಸಿ ಗಳ ಬಗ್ಗೆ ಇಂತಹ ಕಮೆಂಟ್ ಗಳನ್ನು ದೀದಿ ಅವರ ಇಚ್ಚೆ ಇಲ್ಲದೇ ಯಾವುದೇ ಟಿಎಂಸಿ ಮುಖಂಡರು ನೀಡಲು ಸಾದ‍್ಯವಿಲ್ಲ” ಎಂದರು.
“ದೀದಿ ..ಓ.. ದೀದಿ, ನಿಮ್ಮ ಕೋಪವನ್ನು ಹೊರ ಹಾಕಲು ಬಯಸಿದರೆ, ನಾನು ಇಲ್ಲಿದ್ದೇನೆ. ನಿಮಗೆ ಬೇಕಾದುದನ್ನು ನಿಂದಿಸಿ. ಆದರೆ ಬಂಗಾಳದ ಘನತೆ ಮತ್ತು ಸಂಪ್ರದಾಯವನ್ನು ಅವಮಾನಿಸಬೇಡಿ” ಎಂದು ಪ್ರಧಾನಿ ಹೇಳಿದ್ದಾರೆ.
ಓದಿ : ಆನ್ ಲೈನ್ ತರಗತಿಗಳು ಇರುತ್ತವೆ, ಆನ್ ಲೈನ್ ಪರೀಕ್ಷೆ ಸಾಧ್ಯವಿಲ್ಲ : ಡಿಸಿಎಂ