Advertisement

ಕೇಂದ್ರ ಸಚಿವ ಅನಂತ ಕುಮಾರ್‌ ನಿಧನಕ್ಕೆ ಮಮತಾ ಬ್ಯಾನರ್ಜಿ ಶೋಕ

11:19 AM Nov 12, 2018 | Team Udayavani |

ಕೋಲ್ಕತ : ಕೇಂದ್ರ ಸಚಿವ ಅನಂತ ಕುಮಾರ್‌ ನಿಧನಕ್ಕೆ ಪಶ್ಚಿಮ ಬಂಗಾಲ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ.

Advertisement

ಆರು ಬಾರಿಯ ಸಂಸದ, ಮೂರು ಬಾರಿಯ ಕೇಂದ್ರ ಸಚಿವ ಅನಂತ್‌ ಕುಮಾರ್‌ ನಿಧನದಿಂದ ನನಗೆ ಅಪಾರ ದುಃಖವಾಗಿದೆ ಎಂದು ಮಮತಾ ಬ್ಯಾನರ್ಜಿ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. 

59ರ ಹರೆಯದ ಕೇಂದ್ರ ಸಚಿವ ಅನಂತ್‌ ಕುಮಾರ್‌ ಅವರಿಂದು ಸೋಮವಾರ ನಸುಕಿನ ವೇಳೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನ ಹೊಂದಿದರು. ಕಳೆದ ಕೆಲ ತಿಂಗಳಿಂದ ಅವರು ಶ್ವಾಸಕೋಶದ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next