Advertisement

ಕರ್ನಾಟಕ ಫಲಿತಾಂಶ: ‘2024 ರಲ್ಲಿ ಕಾಂಗ್ರೆಸ್ ಬೆಂಬಲಿಸುತ್ತೇನೆ’ಎಂದ ಮಮತಾ ಬ್ಯಾನರ್ಜಿ

08:30 PM May 15, 2023 | Team Udayavani |

ಕೋಲ್ಕತಾ: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವು 2024 ರ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಕುರಿತು ಬಿಜೆಪಿ ವಿರುದ್ಧದ ಉದ್ದೇಶಿತ ರಂಗದಲ್ಲಿ ಪ್ರಮುಖ ಪಾತ್ರ ವಹಿಸುವ ಕಾಂಗ್ರೆಸ್ ವಿರುದ್ಧ ಕೆಲವು ಪ್ರಮುಖ ವಿರೋಧ ಪಕ್ಷದ ಪಾಳಯದ ನಾಯಕರ ಮರುಚಿಂತನೆಗೆ ಕಾರಣವಾಗಿದೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,2024ರ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಪ್ರಾದೇಶಿಕ ಪಕ್ಷಗಳು ಹೆಚ್ಚು ಮಹತ್ವದ ಪಾತ್ರವನ್ನು ವಹಿಸಬೇಕು. ಎಲ್ಲೆಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆಯೋ ಅಲ್ಲಿ ಬಿಜೆಪಿ ಹೋರಾಡಲು ಸಾಧ್ಯವಿಲ್ಲ. ಕರ್ನಾಟಕದ ತೀರ್ಪು ಬಿಜೆಪಿ ವಿರುದ್ಧದ ತೀರ್ಪು. ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ದೌರ್ಜನ್ಯಗಳು ನಡೆಯುತ್ತಿವೆ. ಆರ್ಥಿಕತೆ ಹಾಳಾಗಿದೆ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬುಲ್ಡೋಜರ್ ಮಾಡಲಾಗುತ್ತಿದೆ ಮತ್ತು ಕುಸ್ತಿಪಟುಗಳನ್ನು ಸಹ ಬಿಡಲಾಗುತ್ತಿಲ್ಲ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಬ್ಯಾನರ್ಜಿ, ಕಾಂಗ್ರೆಸ್ ನವರು ಬೇರೆ ರಾಜಕೀಯ ಪಕ್ಷಗಳನ್ನು ಬೆಂಬಲಿಸಬೇಕು. ನಾನು ಕರ್ನಾಟಕಕ್ಕಾಗಿ ನಿಮಗೆ ಬೆಂಬಲ ನೀಡುತ್ತೇನೆ ಆದರೆ ನೀವು ನನ್ನ ವಿರುದ್ಧ ಪ್ರತಿದಿನ ಹೋರಾಡುತ್ತಿದ್ದೀರಿ. ಅದು ನೀತಿಯಾಗಬಾರದು. ಇದು ಎಲ್ಲರಿಗೂ ಅನ್ವಯ. ನಿಮಗೆ ಏನಾದರೂ ಒಳ್ಳೆಯದು ಬಯಸಿದರೆ 2024 ರಲ್ಲಿ ಬಿಜೆಪಿಯನ್ನು ಸೋಲಿಸಲು ತಂತ್ರವನ್ನು ರೂಪಿಸುವಾಗ ಕೆಲವು ಕ್ಷೇತ್ರಗಳಲ್ಲಿ ನೀವು ತ್ಯಾಗ ಮಾಡಬೇಕಾಗುತ್ತದೆ” ಎಂದು ಕಾಂಗ್ರೆಸ್ ಗೆ ಸಲಹೆ ನೀಡಿದರು.

ಪ್ರಾದೇಶಿಕ ಪಕ್ಷಗಳು ತಮ್ಮ ಭದ್ರಕೋಟೆಗಳಲ್ಲಿ ಬಿಜೆಪಿಯನ್ನು ಎದುರಿಸಬೇಕು ಆದರೆ ಕಾಂಗ್ರೆಸ್ ತನ್ನದೇ ಆದ ಸ್ಥಾನಗಳನ್ನು ಗೆಲ್ಲುವತ್ತ ಗಮನ ಹರಿಸಬೇಕು.ಪ್ರಾದೇಶಿಕ ಪಕ್ಷಗಳು ಎಲ್ಲೆಲ್ಲಿ ಪ್ರಬಲವಾಗಿವೆಯೋ, ಅದು ಯುಪಿ, ಬಿಹಾರ ಅಥವಾ ಒಡಿಶಾ, ಬಂಗಾಳ, ಜಾರ್ಖಂಡ್ ಅಥವಾ ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವು ರಾಜ್ಯಗಳಿವೆ, ಬಲಿಷ್ಠ ಪಕ್ಷಕ್ಕೆ ಆದ್ಯತೆ ನೀಡಬೇಕು.ಎಲ್ಲೆಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಅವರ 200+ ಸೀಟುಗಳು ಅಲ್ಲಿ ಅವರು ಹೋರಾಡಲಿ. ನಾವು ಅವರನ್ನು ಬೆಂಬಲಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

“ಯುಪಿಯಲ್ಲಿ ಅಖಿಲೇಶ್ ಯಾದವ್ ಅವರಿಗೆ ಆದ್ಯತೆ ಸಿಗಬೇಕು. ಅಜಿತ್ ಸಿಂಗ್ ಕೂಡ ಇದ್ದಾರೆ ಅವರ ಕಾಂಬಿನೇಷನ್ ಇದೆ. ಅಲ್ಲಿ ಕಾಂಗ್ರೆಸ್ ಜಗಳವಾಡಬಾರದು ಎಂದು ನಾನು ಹೇಳುತ್ತಿಲ್ಲ. ನಾವು ನಿರ್ಧರಿಸೋಣ. ಇದು ಅಂತಿಮ ಹಂತದಲ್ಲಿಲ್ಲ. ಈ ವಿಷಯ ಚರ್ಚೆಯಾದಾಗ ಈ ವಿಷಯವನ್ನು ನಾವು ವಿವರವಾಗಿ ಚರ್ಚಿಸಬಹುದು.ಈಗ ಎಲ್ಲರೂ ಏನನ್ನೋ ಯೋಚಿಸುತ್ತಿದ್ದಾರೆ” ಎಂದರು.

Advertisement

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಇತ್ತೀಚೆಗೆ ಘೋಷಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿರೋಧ ಪಕ್ಷಗಳಿಗೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಕಾರ್ಯಕಾರಿ ಪರಿಹಾರವನ್ನು ಪ್ರಸ್ತಾಪಿಸಿ ಯೋಜನೆಯು ಕಾಂಗ್ರೆಸ್ ಅನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಮತ್ತು ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ಇತ್ತೀಚೆಗೆ ಉಭಯ ಪಕ್ಷಗಳು ಕಾಂಗ್ರೆಸ್‌ನಿಂದ ದೂರವಿರಲಿವೆ ಮತ್ತು 2024 ರ ಲೋಕಸಭೆ ಚುನಾವಣೆಗೆ ಮುನ್ನ ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಸೂಚಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next