Advertisement

Mamata Banerjee ಸೋದರಳಿಯ ಸಂಸದ ಅಭಿಷೇಕ್‌ ಪುತ್ರಿ ಮೇಲೆ ರೇಪ್‌ ಬೆದರಿಕೆ

01:54 AM Aug 27, 2024 | Team Udayavani |

ಕೋಲ್ಕತಾ: ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಮಾಡಿದವರಿಗೆ 10 ಲಕ್ಷ ರೂ. ಬಹುಮಾನ ಎಂದು ಘೋಷಿಸಿದ್ದ ವ್ಯಕ್ತಿ ಮೇಲೆ ಪಶ್ಚಿಮ ಬಂಗಾಲ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ವಿರುದ್ಧ ನಡೆಯು ತ್ತಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ವ್ಯಕ್ತಿಯೊಬ್ಬ ಹೀಗೆ ಘೋಷಣೆ ಕೂಗಿದ್ದ ವೀಡಿಯೋ ವೈರಲ್‌ ಆಗಿದೆ. ಟಿಎಂಸಿ ಇದನ್ನು ತೀವ್ರವಾಗಿ ಖಂಡಿಸಿದ್ದು, ನಿಮ್ಮ ಕೊಳಕು ತಂತ್ರಗಳಿಂದ ನಮ್ಮ ವಿರುದ್ಧ ರಾಜಕೀಯವಾಗಿ ಎಷ್ಟಾದರೂ ಹೋರಾಟ ಮಾಡಿ. ಆದರೆ ಮಕ್ಕಳನ್ನು ಗುರಿಯಾಗಿಸುವುದು ಬೇಡ. ನೀವು ನಿಮ್ಮ ಮಿತಿ ಮೀರಿದ್ದೀರಿ ಎಂದು ಟಿಎಂಸಿ ಸಂಸದ ಡೆರೆಕ್‌ ಒಬ್ರಾಯನ್‌ ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next