Advertisement

ಜೈ ಶ್ರೀರಾಮ್‌ ಗೆ ಕುಗ್ಗಿದ ಟಿಆರ್‌ಪಿ, ಬಿಜೆಪಿಯಿಂದ ಈಗ ಜೈ ಮಾ ಕಾಳಿ: ಟಿಎಂಸಿ ಸಂಸದ

09:52 AM Jun 06, 2019 | Team Udayavani |

ಕೋಲ್ಕತ : ಜೈ ಮಾ ಕಾಳೀ ಘೋಷಣೆಯನ್ನು ಪರಿಚಯಿಸುವ ಬಿಜೆಪಿಯ ನಿರ್ಧಾರವನ್ನು ಟಿಎಂಸಿ ಸಂಸದ ಹಾಗೂ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿಯಾಗಿರುವ ಅಭಿಷೇಕ್‌ ಬ್ಯಾನರ್ಜಿ ಅವರು ಲೇವಡಿ ಮಾಡಿದ್ದಾರೆ.

Advertisement

ಜೈ ಶ್ರೀರಾಮ್‌ ಘೋಷಣೆ ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ – ಟಿಆರ್‌ಪಿ ಯಲ್ಲಿ ಕುಸಿಯುತ್ತಿದ್ದು ಜೈ ಮಾ ಕಾಳೀ ಘೋಷಣೆಯ  ಟಿಆರ್‌ಪಿ ಹೆಚ್ಚುತ್ತಿರುವುದು  ಇದಕ್ಕೆ ಕಾರಣ ಎಂದು ಅಭಿಷೇಕ್‌ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯವರ ಘೋಷಣೆ ಜೈ ಶ್ರೀರಾಮ್‌ ಆದಲ್ಲಿ ನಮ್ಮ ಘೋಷಣೆ ಜೈ ಹಿಂದ್‌ ಆಗಿರುತ್ತದೆ ಎಂದವರು ಹೇಳಿದರು.

ನಾನು ದೇವರಲ್ಲಿ ಪ್ರಾರ್ಥಿಸುವಾಗ ಜೈ ಶ್ರೀರಾಮ್‌ ಎನ್ನುತ್ತೇನೆ. ಆದರೆ ರಾಜಕೀಯ ಅಂಗಣದಲ್ಲಿ ನಾನು ಜೈ ಹಿಂದ್‌ ಎನ್ನುತ್ತೇನೆ ಎಂದಿರುವ ಅಭಿಷೇಕ್‌ ಬ್ಯಾನರ್ಜಿ, ದೇಶದಲ್ಲಿ ನಿರುದ್ಯೋಗ ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರ ಜೈ ಶ್ರೀರಾಮ್‌ ಆಗಿತ್ತು ಎಂದು ಅಭಿಷೇಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next