ನವದೆಹಲಿ: ಗೋವು ಕಳ್ಳಸಾಗಣೆ ಪ್ರಕರಣದ ಆರೋಪದಡಿ ತೃಣಮೂಲ ಕಾಂಗ್ರೆಸ್ ಸಂಸದ, ಬಂಗಾಲಿ ನಟ, ನಿರ್ಮಾಪಕ ದೇವ್ ಅವರನ್ನು ಜಾರಿ ನಿರ್ದೇಶನಾಲಯ ಸುಮಾರು ಐದು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದೆ ಎಂದು ಇ.ಡಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ‘ವೋಟಿ ರವಿ’ಗಿಲ್ಲ: ಬಿ.ವಿ.ಶ್ರೀನಿವಾಸ
ಪ್ರಕರಣದಲ್ಲಿ ಹಲವಾರು ಸಾಕ್ಷಿಗಳು ನೀಡಿದ ಹೇಳಿಕೆಯಲ್ಲಿ ನಟ ದೇವ್ ಹೆಸರು ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ದೇವ್ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಈ ಮೊದಲು ಸಿಬಿಐ ಕೂಡಾ ದೇವ್ ಅವರನ್ನು ವಿಚಾರಣೆಗೊಳಪಡಿಸಿತ್ತು.
ಸಿಬಿಐ ಮೂಲಗಳ ಪ್ರಕಾರ, ಗೋವು ಕಳ್ಳಸಾಗಣೆ ಪ್ರಕರಣದಲ್ಲಿ ಹಲವಾರು ಸಾಕ್ಷಿಗಳು ನೀಡಿರುವ ಹೇಳಿಕೆಯಲ್ಲಿ ನಟ ದೇವ್ ಗೋವು ಕಳ್ಳಸಾಗಣೆಯ ಪ್ರಮುಖ ಆರೋಪಿ ಇನಾಮುಲ್ ಹಖ್ ಜೊತೆ ಹಣಕಾಸು ವ್ಯವಹಾರ ಹೊಂದಿರುವುದು ಬಯಲಾಗಿತ್ತು. ದೇವ್ ಇನಾಮುಲ್ ಹಖ್ ನಿಂದ ಹಲವು ಬಾರಿ ದುಬಾರಿ ಬೆಲೆ ಉಡುಗೊರೆ ಸ್ವೀಕರಿಸಿರುವುದಾಗಿಯೂ ವರದಿ ವಿವರಿಸಿದೆ.
ಗೋವು ಕಳ್ಳಸಾಗಣೆ ಪ್ರಕರಣದಲ್ಲಿ ಸಿಬಿಐ ಕೂಡಾ ನಟ ದೇವ್ ನನ್ನು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಪ್ರಮುಖ ಆರೋಪಿ ಹಖ್ ನಿಂದ ಯಾವ ಉಡುಗೊರೆ ಪಡೆದಿದ್ದೀರಿ ಎಂಬ ಪ್ರಶ್ನೆಯನ್ನು ಸಿಬಿಐ ಕೇಳಿತ್ತು. ಆದರೆ ತೃಣಮೂಲ ಸಂಸದ ದೇವ್, ತನಗೆ ಇನಾಮುಕ್ ಬಗ್ಗೆ ತಿಳಿದಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಗೋವು ಕಳ್ಳಸಾಗಣೆ ಪ್ರಕರಣದಲ್ಲಿ ದೇವ್ ಗೆಳೆಯ, ಸಹ ನಟ ಪಿಂಟು ಮಂಡಲ್ ಗೂ ಸಿಬಿಐ ಸಮನ್ಸ್ ನೀಡಿದ್ದು, ವಿಚಾರಣೆಗೊಳಪಡಿಸಿತ್ತು ಎಂದು ವರದಿ ಹೇಳಿದೆ.