Advertisement

ತುಘಲಕ್‌ ರಾಜ್‌; ಆಧಾರ್‌ ಲಿಂಕ್‌ ಬಗ್ಗೆ ಮಮತಾ ಬ್ಯಾನರ್ಜಿ ಕಿಡಿ 

10:16 AM Nov 21, 2017 | Team Udayavani |

ಕೋಲ್ಕತಾ: 12 ಅಂಕೆಗಳ ಆಧಾರ್‌ ನಂಬರನ್ನು ಮೊಬೈಲ್‌ ಮತ್ತು ಬ್ಯಾಂಕ್‌ ಖಾತೆಗೆ ಕಡ್ಡಾಯ ಲಿಂಕ್‌  ಮಾಡುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಮ್ಯಾನರ್ಜಿ ಕಿಡಿ ಕಾರಿದ್ದಾರೆ. 

Advertisement

ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದ ಬ್ಯಾನರ್ಜಿ ‘ಇದು ತುಘಲಕ್‌ ದರ್ಬಾರ್‌. ನಮಗೆ ಗೊತ್ತಿಲ್ಲ, ಯಾಕೆ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು. ನಾವು ಈಗಾಗಲೆ ಪಾನ್‌ ಕಾರ್ಡ್‌, ವೋಟರ್‌ ಐಡಿ ಹೊಂದಿದ್ದು, ಆಧಾರ್‌ ಲಿಂಕ್‌ ಮಾಡುವುದು ವ್ಯಕ್ತಿ ಮತ್ತು ಸಮಾಜಕ್ಕೆ ಅಪಾಯಕಾರಿ’ ಎಂದರು.

‘ಅವರು ನಮ್ಮ ಎಲ್ಲಾ ವೈಯಕ್ತಿಕ ಮಾತುಗಳನ್ನು ಆಲಿಸುತ್ತಾರೆ. ತಾಯಿ ಮಗಳೊಂದಿಗೆ ಮಾತನಾಡಿದ್ದು, ಗಂಡ ಹೆಂಡಿತಿಯೊಂದಿಗೆ ಮಾತನಾಡಿದ್ದು ಎಲ್ಲವೂ ಇನ್ನು ಸಾಮಾಜಿಕ ತಾಣಗಳಲ್ಲಿ ಬಹಿರಂಗವಾಗುತ್ತದೆ’ ಎಂದು ಕಿಡಿ ಕಾರಿದ್ದಾರೆ. 

‘ನಾನು ಒಂದು ಕಾರ್ಡ್‌ ವ್ಯವಸ್ಥೆಯನ್ನು ಒಪ್ಪುತ್ತೇನೆ ಆದರೆ 10 ಕಾರ್ಡ್‌ಗಳನ್ನು ಒಪ್ಪಲು ಸಾಧ್ಯ ಇಲ್ಲ’ ಎಂದರು.

ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಸುಮಾರು 200ಕ್ಕೂ ಹೆಚ್ಚು ಇಲಾಖೆಗಳು ನಾನಾ ಆಧಾರ್‌ ಕಾರ್ಡ್‌ಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿವೆ ಎಂಬ ಆಘಾತಕಾರಿ ವಿಚಾರವನ್ನು ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಹೊರಹಾಕಿತ್ತು. ಆರ್‌ಟಿಐಯಡಿ ಕೇಳಿದ್ದ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಈ ವಿಚಾರ ಹೊರಬಿದ್ದಿತ್ತು. 

Advertisement

ವಿವಿಧ ಯೋಜನೆಗಳಿಗೆ ಆಧಾರ್‌ ಸಂಖ್ಯೆಗಳ ಜೋಡಣೆಯಿಂದ ಆಗುವ ಸಾರ್ವಜನಿಕರ ಮಾಹಿತಿಯ ಸೋರಿಕೆ ವಿರುದ್ಧ  “ಮಾಹಿತಿ ಖಾಸಗಿತನ’ ಬಗ್ಗೆ ಕೂಗೆದ್ದಿರುವ ಈ ಸಂದರ್ಭದಲ್ಲೇ ಯುಐಡಿಎಐನ ಈ ಹೇಳಿಕೆ ಆಧಾರ್‌ ಜೋಡಣೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮತ್ತೆ ಹುಟ್ಟಿಕೊಂಡಿತ್ತು. 

  ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಪ್ರಾಧಿಕಾರ, ವೆಬ್‌ಸೈಟ್‌ಗಳಲ್ಲಿ ಮಾಹಿತಿ ಸೋರಿಕೆ ವಿಚಾರ ಗೊತ್ತಾದೊಡನೆ ಆ ಮಾಹಿತಿಯನ್ನು ತೆಗೆದುಹಾಕಲಾಗಿದೆ ಎಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next