ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಸಂದೇಶ್‌ಖಾಲಿ ಸಂತ್ರಸ್ತ ಮಹಿಳೆಯರನ್ನು ಭೇಟಿ ಮಾಡಿದ ಮಾರನೇ ದಿನವೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿಗೆ ಸವಾಲೆಸೆಯುವಂತೆ ಸಂತ್ರಸ್ತರ ಜತೆಗೆ ಮಾತುಕತೆ ನಡೆಸಿದ್ದಾರೆ.
ಕೋಲ್ಕತಾದಲ್ಲಿ ಗುರುವಾರ ಟಿಎಂಸಿ ಕಾರ್ಯಕರ್ತರ ಜತೆಗೆ “ಮಹಿಳಾದಾರ್ ಅಧಿಕಾರ್ ಅಮದಾರ್ ಅಂಗೀಕಾರ್’ (ಮಹಿಳಾ ಹಕ್ಕುಗಳೆಡೆಗೆ ನಮ್ಮ ಬದ್ಧತೆ) ರ್ಯಾಲಿ ನಡೆಸಿದರು.
ಸ್ಥಳೀಯ ಟಿಎಂಸಿ ನಾಯಕರ ವಿರುದ್ಧ ಲೈಂಗಿಕ ಕಿರುಕುಳದ ರೋಪ ಮಾಡಿದ್ದ ಸಂದೇಶ್‌ಖಾಲಿಯ ಕೆಲವು ಮಹಿಳೆಯರೂ ಅದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಮತಾ “ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಬಿಜೆಪಿ ನಾಯಕರು ದೂರುತ್ತಿದ್ದಾರೆ. ಬಂಗಾಳದಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತರಾಗಿದ್ದಾರೆಂದು ಸವಾಲು ಹಾಕುತ್ತೇನೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದಾಗ ನೀವೆಲ್ಲಿದ್ದೀರಿ? ಹತ್ರಾಸ್‌ನಲ್ಲಿ ಯುವತಿಯ ಅತ್ಯಾಚಾರ, ಬಿಲ್ಕಿಸ್ ಬಾನೋ ಪ್ರಕರಣ ಮರೆತಿದ್ದೀರಾ?’ ಎಂದು ದೀದಿ ಪ್ರಶ್ನಿಸಿದರು.
ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತ:
ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಬಿಜೆಪಿ ನಾಯಕರು ದೂರುತ್ತಿದ್ದಾರೆ. ಬಂಗಾಳದಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತರಾಗಿದ್ದಾರೆಂದು ಸವಾಲು ಹಾಕುತ್ತೇನೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದಾಗ ನೀವೆಲ್ಲಿದ್ದೀರಿ?
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ