ಹೊಸದಿಲ್ಲಿ: ಪಾಟ್ನಾದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಪಕ್ಷಗಳ ಏಕತಾ ಸಭೆಯಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಬಂಗಾಳದಲ್ಲಿ ಕಾಂಗ್ರೆಸ್‌ನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ದೊಡ್ಡ ಮನಸ್ಸು ಮಾಡಬೇಕು, ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡರೆ ಬಿಜೆಪಿಗೆ ಲಾಭವಾಗಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : We are united; 17 ಪ್ರತಿಪಕ್ಷಗಳ ಹೋರಾಟದ ಆರಂಭಕ್ಕೆ ವೇದಿಕೆಯಾದ ಪಾಟ್ನಾ
ಮಮತಾ ಅವರ ಹೇಳಿಕೆಗೆ ಕಾರಣವಾಗಿದ್ದು ಬಂಗಾಳದಲ್ಲಿನ ರಾಜಕೀಯ ಪರಿಸ್ಥಿತಿ. ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಟಿಎಂಸಿ ಯನ್ನು ‘ಕಳ್ಳರ ಪಕ್ಷ’ ಎಂದು ಕರೆದಿದ್ದಾರೆ. ವಿರೋಧ ಪಕ್ಷದ ಸಭೆಯ ನಡುವೆ, ಚೌಧರಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ನೀಡಿರುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಇನ್ನೊಂದೆಡೆ ಕಾಂಗ್ರೆಸ್ ಬಂಗಾಳದಲ್ಲಿ ಟಿಎಂಸಿ ವಿರುದ್ದ ದಿನದಿಂದ ದಿನಕ್ಕೆ ವೈರ ಬೆಳೆಸಿಕೊಳ್ಳುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಯಾವ ರೀತಿ ಚುನಾವಣೆ ಎದುರಿಸಲಿವೆ ಎನ್ನುವ ಕುತೂಹಲ ಮೂಡಿದೆ.