ಕೋಲ್ಕತಾ: ಕೇಂದ್ರದಲ್ಲಿನ ರಾಜಕೀಯ ಪರಿಸ್ಥಿತಿ ಬಗ್ಗೆ ಟಿಎಂಸಿ ಕಾದು ನೋಡುವ ತಂತ್ರ ಅನುಸರಿಸುವುದಾಗಿ ಹೇಳಿದೆ. ಕೋಲ್ಕತಾದಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ “ಎನ್‌ಡಿಎ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಅನುಮಾನ.
ಇಂದು ಇಂಡಿಯಾ ಕೂಟ ಸರ್ಕಾರ ರಚನೆ ಮಾಡದೇ ಇರಬಹುದು. ಆದರೆ ನಾಳೆ ಮಾಡುವುದಿಲ್ಲ ಎಂದು ಹೇಳಲಾಗದು’ ಎಂದರು.
ದುರ್ಬಲ ಹಾಗೂ ಅಸ್ಥಿರವಾದ ಎನ್‌ಡಿಎ ಅಧಿಕಾರದಿಂದ ಕೆಳಗಿಳಿದರೆ ಬಹಳ ಸಂತೋಷ ಎಂದಿದ್ದಾರೆ.
ಬಿಜೆಪಿಯು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ, ಕಾನೂನುಬಾಹಿರವಾಗಿ ಸರ್ಕಾರ ರಚಿಸಲು ಅಣಿಯಾಗಿದೆ. ಇಂದು ಇಂಡಿಯಾ ಕೂಟ ಸರ್ಕಾರ ರಚನೆಗೆ ಹಕ್ಕು ಮಂಡಿಸದೇ ಇರಬಹುದು. ಅದರ ಅರ್ಥ ನಾಳೆ ಮಂಡಿಸುವುದಿಲ್ಲ ಎಂದಲ್ಲ. ಸ್ವಲ್ಪ ಸಮಯ ಕಾದು ನೋಡೋಣ ಎಂದು ಟಿಎಂಸಿ ಮುಖ್ಯಸ್ಥೆ ಹೇಳಿದ್ದಾರೆ. ಟಿಎಂಸಿ ಸಭೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 3ನೇ ಅವಧಿಯಲ್ಲಿ ಪೂರ್ಣಾವಧಿಗೆ ಇರಲಾರದು ಎಂದು ಹೇಳಿದ್ದಾರೆ ಎನ್ನಲಾಗಿದೆ.