Advertisement

ನಿರ್ಮಾಣ ಹಂತದಲ್ಲೇ ಕುಸಿಯುತ್ತಿದೆ ಅಂಬೇಡ್ಕರ್‌ ಭವನ!

05:25 PM Oct 06, 2021 | Team Udayavani |

ನಂಜನಗೂಡು: ತಾಲೂಕಿನ ಹಾದನೂರು ಒಡೆಯನಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್‌ ಭವನ ಕಳಪೆ ಕಾಮಗಾರಿಯಿಂದಕುಸಿಯಲು ಆರಂಭಿಸಿದ್ದು, ಗಿಡಗಂಟಿಗಳು ಬೆಳೆದಿರುವುದರಿಂದ ಪಾಳು ಬಿದ್ದಂತೆ ಕಾಣುತ್ತಿದೆ.

Advertisement

ನಗರದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ಭವನ ಕಟ್ಟಡದ ಕಾಮಗಾರಿಯನ್ನು ಸರ್ಕಾರಿ ಸಾಮ್ಯದ ಭೂಸೇನಾ ನಿಗಮಕ್ಕೆ ವಹಿಸಿ ಹಣ ನೀಡಲಾಗಿತ್ತು. ಕೇವಲ ಅರೆಬರೆ ಕಾಮಗಾರಿಯನ್ನೇ ಮಾಡುತ್ತಿರುವ ನಿಗಮ ಇಲ್ಲಿಯೂ ಅದನ್ನೇ ಮಾಡಿದೆ. ತಾಲೂಕಿನ ಹಾದನೂರು ಒಡೆಯನಪುರದಲ್ಲಿ ಅಂಬೇಡ್ಕರ್‌ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಶಾಸಕ ಹರ್ಷವರ್ಧನ್‌ 2018ರಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು.

ಇದನ್ನೂ ಓದಿ:– ಚಂದ್ರಗುತ್ತಿಯಲ್ಲಿ ನವರಾತ್ರಿ:14ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ:ಆರ್.ಶ್ರೀಧರ್ ಹುಲ್ತಿಕೊಪ್ಪ

ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದ್ದ ಭೂಸೇನಾ ನಿಗಮವು ಕಟ್ಟಡವನ್ನು ಅರೆ ಬರೆ ನಿರ್ಮಿಸಿ ಅತ್ತ ತಲೆ ಹಾಕಲೇ ಇಲ್ಲ. ಈಗ ಕಟ್ಟಡ ಪೂರ್ಣಗೊಳ್ಳುವ ಮೊದಲೇ ಕಿಟಕಿಯ ಸಜ್ಜಾ ಕುಸಿದು ಬೀಳಲಾರಂಭಿಸಿದ್ದು, ಕಟ್ಟಡದ ಕಳಪೆ ಕಾಮಗಾರಿಯನ್ನು ಜಗಜಾjಹೀರುಗೊಳಿಸಿದೆ.

ಮೂರು ರ್ವಗಳ ಹಿಂದೆ ಆರಂಭವಾದ ಕಾಮಗಾರಿ ಮುಗಿದೇ ಇಲ್ಲ. ಆಗಲೇ ಕಟ್ಟಡದ ಒಳ ಹಾಗೂ ಹೊರಭಾಗದಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳದು ನಿಂತಿವೆ. ಈಗ ನೋಡಿದರೆ ಕಿಟಕಿಯ ಸಜ್ಜಾ ಕಳಚಿ ಬೀಳುತ್ತಿದ್ದು, ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಗ್ರಾಪಂ ಸದಸ್ಯ ಗ್ರಾಮದ ಬಂಗಾರ.

Advertisement

ತಕ್ಷಣ ಕಾಮಗಾರಿ ಪುನರಾರಂಭವಾಗಬೇಕು ಎಂದು ಅವರುಆಗ್ರಹಿಸಿದ್ದಾರೆ. ಕಾಮಗಾರಿ ವಹಿಸಿಕೊಂಡ ನಿರ್ಮಿತಿ ಕೇಂದ್ರ ತಾನು ಕಾಮಗಾರಿ ಮಾಡದೆ ಶೇಖಡಾವಾರು ಕಮಿಷನ್‌ ಮೇಲೆ ಕಾಮಗಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸಿದರೆ ಇನ್ನೇನಾದೀತು ಎಂದು ಗ್ರಾಮದ ಜಿ. ನಾರಾಯಣ ಪ್ರಶ್ನಿಸಿ

ದ್ದಾರ. ಮುಂದುವರಿದ ಅವರು ಕಟ್ಟಡದಪಾಯತೆಗೆದು ಭರ್ತಿ ಮಾಡಿದ ಗುತ್ತಿಗೆ ದಾರರರೇ ಬೇರೆ ನಂತರ ಗೊಡೆ ಕಾಮಗಾರಿ ಮಾಡಿದವರೇ ಬೇರೆಯವರಾಗಿದ್ದಾರೆ. ಇನ್ನೇನು ಆರ್‌ಸಿಸಿ ಹಾಕಿ ಕಟ್ಟಡ ಪೂರ್ಣವಾಗುವ ಮೊದಲೇ ಕಿಟಕಿಯ ಸಜ್ಜಾ ಬೀಳಲಾರಂಭಿಸಿದ್ದು, ಈ ಭವನದ ಗುಣಮಟ್ಟ ಕಾಮಗಾರಿಗೆ ಸಾಕ್ಷಿಯಾಗಲಾರಂಭಿಸಿದೆ ಎಂದು ತಿಳಿಸಿದ್ದಾರೆ.

  • ಶ್ರೀಧರ್‌ ಆರ್‌.ಭಟ್‌
Advertisement

Udayavani is now on Telegram. Click here to join our channel and stay updated with the latest news.

Next