Advertisement
ವರ್ಷಾಂತ್ಯಕ್ಕೆ ಪ್ರವಾಸಿ ತಾಣಗಳಿಗೆ ಶಾಲೆಗಳಲ್ಲಿ ಅಲ್ಲದೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಪ್ರವಾಸಿಗರು ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಡಿಸೆಂಬರ್ 1ರಿಂದ ಮಲ್ಪೆ ಕಡಲತೀರದಲ್ಲಿ ಪ್ರವಾಸಿಗರ ದಂಡೇ ಬಂದಿದೆ. ಬೆಳಗ್ಗೆ 7ಗಂಟೆಯಿಂದಲೇ ವಾಹನಗಳು ಇತ್ತ ಕಡೆಗೆ ಸಾಲು ಸಾಲಾಗಿ ಬರುವುದು ಕಂಡು ಬರುತ್ತದೆ. ಬೆಂಗಳೂರು, ಮೈಸೂರು, ಮಂಡ್ಯ, ಹಾವೇರಿ ಹಾಗೂ ಗದಗ ಸೇರಿದಂತೆ ನೆರೆಯ ರಾಜ್ಯ ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮಳೆಗಾಲ ಕಳೆದು ಸಮುದ್ರ ಕೂಡ ಶಾಂತವಾಗಿದೆ. ಮಕ್ಕಳು ಹಿರಿಯರು ಎನ್ನದೇ ಸಮುದ್ರದ ನೀರಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ.
ಹೊರ ಜಿಲ್ಲೆಯ ಬಹುತೇಕ ಶಾಲಾ ಪ್ರವಾಸಕ್ಕೆ ಬಂದಿರುವ ಜನ ರಸ್ತೆ ಬದಿಯಲ್ಲೇ ಅಡುಗೆಯನ್ನು ತಯಾರಿಸುತ್ತಾರೆ. ಇದರಿಂದ ಇತರರಿಗೂ ತೊಂದರೆಯಾಗುತ್ತಿರುವುದಲ್ಲದೆ ಅಡುಗೆ ಮಾಡಿದ ತ್ಯಾಜ್ಯಗಳನ್ನು ಅಲ್ಲಿ ಬಿಸಾಕುವುದರಿಂದ ಬೀಚ್‌ನ ಸೌಂದರ್ಯಕ್ಕೂ ದಕ್ಕೆಯಾಗುತ್ತಿದೆ. ಸದಾ ವಾಹನ ಸಂಚಾರದಿಂದಾಗಿ ರಸ್ತೆ ಧೂಳಿನಿಂದ ಕೂಡಿದ್ದಾಗಿದ್ದು, ಇಲ್ಲಿ ಅಡುಗೆ ಮಾಡಿ ಮಕ್ಕಳಿಗೆ ನೀಡುತ್ತಿರುವುದು ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಪ್ರವಾಸದ ಆಯೋಜಕರು ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
Related Articles
Advertisement
– ಮಂಜು ಕೊಳ, ಬೀಚ್ ಅಭಿವೃದ್ಧಿ ಸಮಿತಿಯ ಸದಸ್ಯ