Advertisement
ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗೆ ಬೀಗ ಹಾಕಿಕೊಂಡು ಶಾಂತಿ ಅವರು ಈ ಕೃತ್ಯವೆಸಗಿದ್ದರು. ಅವರ ಮಗಳು ಮತ್ತು ಅಳಿಯ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದು ವಾಪಸು ಬಂದಾಗ ವಿಷಯ ಗೊತ್ತಾಗಿದೆ ಎನ್ನಲಾಗಿದೆ.
ಮಲ್ಪೆ: ಮಲ್ಪೆ ಬಸ್ ನಿಲ್ದಾಣದ ಬಳಿಯ ನಿಧಿ ಮೊಬೈಲ್ ಶಾಪ್ಗೆ ರಾತ್ರಿ ಕಳ್ಳರು ನುಗ್ಗಿ ಒಂದು ಲಕ್ಷ ರೂಪಾಯಿ ನಗದು ಸೇರಿದಂತೆ 80 ಸಾವಿರ ರೂಪಾಯಿ ಮೌಲ್ಯದ ಇತರ ಪರಿಕರಗಳನ್ನು ಕಳವುಗೈದಿದ್ದಾರೆ. ಶಟರ್ ತೆರೆದು ಒಳ ಪ್ರವೇಶಿಸಿದ ಕಳ್ಳರು ಲಾಪ್ಟಾಪ್, ಸಿಸಿಟಿವಿ ಡಿವಿಆರ್, ಹಾರ್ಡ್ಡಿಸ್ಕ್, ಪವರ್ ಸಪ್ಲಯರ್, ಸೆಕೆಂಡ್ ಹ್ಯಾಂಡ್ ಮೊಬೈಲ್ ಕಳವು ಮಾಡಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.